ಸ್ಥಳೀಯ ಟಿ-20 ಪಂದ್ಯದಲ್ಲಿ 10 ವಿಕೆಟ್ ಪಡೆದು 15ರ ಬಾಲಕನಿಂದ ನೂತನ ದಾಖಲೆ ನಿರ್ಮಾಣ

ರಾಜಸ್ಥಾನದ ಒಂದು ಸಣ್ಣ ಗ್ರಾಮದಿಂದ ಬಂದ 15 ವರ್ಷ ಪ್ರಾಯದ ಬೌಲರ್ ಆಕಾಶ್ ಚೌಧರಿ ಇದೀಗ ನೂತನ ಇತಿಹಾಸವನ್ನು ಬರೆದಿದ್ದಾರೆ.
ಆಕಾಶ್ ಚೌಧರಿ
ಆಕಾಶ್ ಚೌಧರಿ
ಜೈಪುರ್: ರಾಜಸ್ಥಾನದ ಒಂದು ಸಣ್ಣ ಗ್ರಾಮದಿಂದ ಬಂದ 15 ವರ್ಷ ಪ್ರಾಯದ ಬೌಲರ್ ಆಕಾಶ್ ಚೌಧರಿ ಇದೀಗ ನೂತನ ಇತಿಹಾಸವನ್ನು ಬರೆದಿದ್ದಾರೆ. ನಾಲ್ಕು ಓವರ್ ಗಳಲ್ಲಿ ಒಂದೇ ಒಂದು ರನ್ ನೀಡದೆ 10 ವಿಕೆಟ್ ಗಳಿಸಿದ್ದಾರೆ. ಜೈಪುರ ದಲ್ಲಿ ನಡೆದ ಸ್ಥಳೀಯ ಟಿ -20 ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.
"ಒಬ್ಬ ಉತ್ತಮ ತರಬೇತುದಾರ ಕ್ರಿಕೆಟಿಗನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾನೆ .ನನ್ನ ತರಬೇತುದಾರರ ಬೆಂಬಲ ಮತ್ತು ನನ್ನ ಶ್ರಮ ದಿಂದ ಮಾತ್ರ ಈ ಸಾಧನೆಯನ್ನು ಮಾಡಲು ಸಾಧ್ಯವಾಯಿತು, ನಾನು ಮುಂದೊಂದು ದಿನ ಭಾರತಕ್ಕಾಗಿ ಆಡಲು ಬಯಸುತ್ತೇನೆ" ಎಂದು ಆಕಾಶ್ ಉತ್ಸಾಹದಿಂದ ನುಡಿದರು.
ಜೈಪುರದ ಸ್ಥಳೀಯ ಪಂದ್ಯಾವಳಿಯಲ್ಲಿ ಪರ್ಲ್ ಕ್ರಿಕೆಟ್ ಅಕಾಡೆಮಿ ಮತ್ತು ದೀಶಾ ಕ್ರಿಕೆಟ್ ಅಕಾಡೆಮಿನಡೆದ ಪಂದ್ಯಾವಳಿಯಲ್ಲಿ ಆಕಾಶ್ ದೀಶಾ ಕ್ರಿಕೆಟ್ ಅಕಾಡೆಮಿಯ ಪರವಾಗಿ ಆಟವಾಡಿದ್ದರು.
ಆಕಾಶ್ ಅವರು ಮೊದಲು ಬಿಕಾನೇರ್ ನ ಶಾರ್ಡುಲ್ ಅಕಾಡೆಮಿಗೆ ಸೇರಿದ್ದರು ಅಲ್ಲಿಂದ ಹೊರನಡೆದ ನಂತರ ಈಗ ತರಬೇತುದಾರರಾದ ಅರಾವಳಿ ಕ್ರಿಕೆಟ್ ಅಕಾಡೆಮಿಯ ವಿವೇಕ್ ಯಾದವ್ ಬಳಿ ತರಬೇತಿ ಹೊಂದುತ್ತಿದ್ದಾರೆ.
"ಎರಡು ವರ್ಷಗಳ ಹಿಂದೆ ಅಕಾಶ್ ನನ್ನ ಅಕಾಡೆಮಿಗೆ ಬಂದಿದ್ದರು, ಅವರು ಅನೇಕ ಪಂದ್ಯಗಳಲ್ಲಿ ಐದೈದು ವಿಕೆಟ್ ಗಳನ್ನು ಪಡೆದಿದ್ದಾರೆ, ಆದರೆ ಒಂದು ರನ್ ಸಹ ನೀಡದೆ 10 ವಿಕೆಟ್ ಗಳನ್ನು ಪಡೆವ ಮೂಲಕ ವಿಶ್ವ ದಾಖಲೆ ನಿರ್ಮಿಸುತ್ತಾರೆಂದು ನನ್ನ ಕಲ್ಪನೆಯಲ್ಲಿಯೂ ಇರಲಿಲ್ಲ. ಅವರು ಶ್ರೇಷ್ಠ ಬೌಲರ್ ಆಗುವುದರಲ್ಲಿ ಅನುಮಾನವಿಲ್ಲ.  ಅಂಡರ್ -16 ತಂದಕ್ಕೆ ಅವರು ಆಯ್ಕೆ ಆಗುತ್ತಾರೆಂದು ನಾನು ಖಚಿತವಾಗಿ ಹೇಳುತ್ತೇನೆ"ಎಂದು ತರಬೇತುದಾರ ವಿವೇಕ್ ಯಾದವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com