ಮಾಜಿ ಕ್ರಿಕೆಟಿಗ ಮಿಲ್ಕಾ ಸಿಂಗ್ ಇನ್ನಿಲ್ಲ

ಮಾಜಿ ಕ್ರಿಕೆಟಿಗ ಎ.ಜಿ ಮಿಲ್ಕಾ ಸಿಂಗ್ ಚೆನ್ನೈನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಎ ಜಿ ಮಿಲ್ಖಾ ಸಿಂಗ್
ಎ ಜಿ ಮಿಲ್ಖಾ ಸಿಂಗ್
Updated on
ಚೆನ್ನೈ: ಮಾಜಿ ಕ್ರಿಕೆಟಿಗ ಎ.ಜಿ ಮಿಲ್ಕಾ ಸಿಂಗ್ ಚೆನ್ನೈನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಒಬ್ಬ ಮಗ ಹಾಗೂ ಮಗಳನ್ನು ಅಗಲಿದ್ದಾರೆ.
ಮಿಲ್ಕಾ ಸಿಂಗ್ ಅವರು ಅರವತ್ತರ ದಶಕದಲ್ಲಿ ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಆಡಿದ್ದು ಅವರ ಸಹೋದರ ಕೃಅಪಾಲ್ ಸಿಂಗ್ ಸಹ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದರು. 1961-62 ರಲ್ಲಿ ಇಂಗ್ಲೆಂಡ್ ವಿರುದ್ಧದ ಒಂದು ಟೆಸ್ಟ್ ಪಂದ್ಯದಲ್ಲಿ ಅವರು ಒಟ್ಟಾಗಿ ಆಡಿದರು.
ಮಿಲ್ಕಾ ಸಿಂಗ್ ಅವರು ಎಡಗೈ ಬ್ಯಾಟ್ಸ್‌ಮನ್, ಅದ್ಭುತ ಫೀಲ್ಡರ್ ಎನಿಸಿದ್ದರು. ಅವರು ತಮ್ಮ ಹದಿನೇಳನೇ ವರ್ಷದಲ್ಲಿ ಚೆನ್ನೈನಲ್ಲಿ ರಣಜಿ ಟ್ರೋಫಿಯಲ್ಲಿ ಭಾಗವಹಿಸುವ ಮೂಲಕ ಕ್ರಿಕೆಟ್ ಜಗತ್ತಿಗೆ ಪದಾರ್ಪಣೆ ಮಾಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಎಂಟು ಶತಕಗ ಸೇರಿ 4,000 ರನ್‌ ಗಳನ್ನು ಕಲೆ ಹಾಕಿದ್ದ ಮಿಲ್ಕಾ ಸಿಂಗ್ ಅವರ ಸೋದರ ಕೃಪಾಲ್ ಸಿಂಗ್ ಸಹ 14 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು
ಮಿಲ್ಕಾ ಸಿಂಗ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಯಾಗಿದ್ದರು.
ಭಾರತ ತಂದದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ, ಸಿಂಗ್ ಅವರ ಮರಣಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಜಿ ತರಬೇತುದಾರ ಎಂ ಕೆ ಇಕ್ಬಾಲ್ ಮಿಲ್ಕಾ ಸಿಂಗ್ ಒಬ್ಬ ಸ್ಟೈಲಿಶ್ ಬ್ಯಾಟ್ಸಮನ್ ಆಗಿದ್ದರುವ್ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com