ಐಸಿಸಿ ಟೆಸ್ಟ್ ರ್ಯಾಂಕಿಂಗ್: ಐದನೇ ಸ್ಥಾನಕ್ಕೇರಿದ ಕೊಹ್ಲಿ

ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಆರಂಭಿಕ ಟೆಸ್ಟ್ ನಲ್ಲಿ ಭಾರತೀಯ ತಂಡದ ನಾಯಕನ್ ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on
ದುಬೈ: ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಆರಂಭಿಕ ಟೆಸ್ಟ್ ನಲ್ಲಿ ಭಾರತೀಯ ತಂಡದ ನಾಯಕನ್ ವಿರಾಟ್ ಕೊಹ್ಲಿ ಉತ್ತಮ ಆಟ ಪ್ರದರ್ಶಿಸಿದ್ದರು. ಇದೀಗ  ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಐದನೇ ಸ್ಥಾನಕ್ಕೆ ಏರಿದ್ದಾರೆ.
12 ಬೌಂಡರಿ ಮತ್ತು ಆರು ಅರ್ಧಶತಕ ಸೇರಿದಂತೆ 104 ರನ್ ಗಳಿಸಿದ್ದ ಕೊಹ್ಲಿ.ಭಾರತ ತನ್ನ ದ್ವಿತೀಯ ಇನ್ನಿಂಗ್ಸ್ ನಲ್ಲಿ  352-8 ಕ್ಕೆ ಡಿಕ್ಲೇರ್ ಮಾಡಿಕೊಳ್ಳಲು ಕಾರಣರಾಗಿದ್ದರು. ಇದೇ ವೇಳೆ ಕಕೊಹ್ಲಿ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಐವತ್ತನೇ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ  ವಿಶ್ವದ 8ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು.
ಇದಾಗಲೇ ಟಿ 20 ಮತ್ತು ಏಕದಿನಪಂದ್ಯಗಳಲ್ಲಿ ಪ್ರಥ ಸ್ಥಾನದಲ್ಲಿರುವ ಕೊಹ್ಲಿ ಇದೀಗ ಟೆಸ್ಟ್ ನಲ್ಲಿಯೂ ಐದನೇ ಸ್ಥಾನ ಪಡೆದು ಮಿಂಚಿದ್ದಾರೆ.
ಇದೇ ವೇಳೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ  ಶಿಖರ್ ಧವನ್ 28, ಭುವನೇಶ್ವರ್ ಕುಮಾರ್ 29ನೇ ಸ್ಥಾನ ಪಡೆದರೆ ಬೌಲರ್ ಗಳಲ್ಲಿ ರವೀಂದ್ರ ಜಡೇಜಾ ಅವರು ಮೂರನೇ ಸ್ಥಾನ ಗಿಟ್ಟಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com