ಇನ್ನುಂದೆ ಭಾರತೀಯ ಕ್ರಿಕೆಟಿಗರಿಗೂ ಡೋಪಿಂಗ್ ಟೆಸ್ಟ್ ಕಡ್ಡಾಯ!

ಭಾರತೀಯ ಕ್ರಿಕೆಟಿಗರಿಗೂ ಡೋಪಿಂಗ್ ಟೆಸ್ಟ್ ನಡೆಸುವಂತೆ ವಿಶ್ವ ವಿರೋಧಿ ಡೋಪಿಂಗ್ ಏಜೆನ್ಸಿ(ವಾಡಾ) ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದಿದ್ದು ಈ ಹಿನ್ನೆಲೆಯಲ್ಲಿ...
ಭಾರತೀಯ ಕ್ರಿಕೆಟಿಗರು
ಭಾರತೀಯ ಕ್ರಿಕೆಟಿಗರು
ನವದೆಹಲಿ: ಭಾರತೀಯ ಕ್ರಿಕೆಟಿಗರಿಗೂ ಡೋಪಿಂಗ್ ಟೆಸ್ಟ್ ನಡೆಸುವಂತೆ ವಿಶ್ವ ವಿರೋಧಿ ಡೋಪಿಂಗ್ ಏಜೆನ್ಸಿ(ವಾಡಾ) ಕೇಂದ್ರ ಸಚಿವಾಲಯಕ್ಕೆ ಪತ್ರ ಬರೆದಿದ್ದು ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟಿಗರಿಗೂ ಡೋಪಿಂಗ್ ಟೆಸ್ಟ್ ನಡೆಸುವಂತೆ ರಾಷ್ಟ್ರೀಯ ವಿರೋಧಿ ಡೋಪಿಂಗ್ ಏಜೆನ್ಸಿ(ನಾಡ)ಗೆ ಸಚಿವಾಲಯ ನಿರ್ದೇಶಿಸಿದೆ. 
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ 2016ರಲ್ಲಿ ಮಾನ್ಯತೆ ಪಡೆದಿದ್ದ ಭಾರತೀಯ ಕ್ರಿಕೆಟಿಗನೊಬ್ಬ ನಿಷೇಧಿತ ಮದ್ದು ಸೇವನೆ ಮಾಡಿದ್ದು, ವಿಶ್ವ ಉದ್ದೀಪನ ಮದ್ದು ತಡೆ ಘಟಕ(ವಾಡಾ) ನಡೆಸಿದ್ದ ಡೋಪಿಂಗ್ ಟೆಸ್ಟ್ ನಲ್ಲಿ ಆಟಗಾರನೊಬ್ಬ ಸಿಕ್ಕಿಬಿದ್ದಿದ್ದ ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟಿಗೂ ಡೋಪಿಂಗ್ ಸಂಹಿತೆ ಜಾರಿಗೆಗೊಳಿಸುವಂತೆ ವಾಡಾ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿತ್ತು. 
ಭಾರತೀಯ ಕ್ರಿಕೆಟಿಗೂ ಡೋಪಿಂಗ್ ಸಂಹಿತೆ ಜಾರಿಗೊಳಿಸುವಂತೆ ವಾಡಾದಿಂದ ಪತ್ರ ಬಂದಿದ್ದು ಈ ಹಿನ್ನೆಲೆಯಲ್ಲಿ ನಾಡಾದ ಸಾಮಾನ್ಯ ನಿರ್ದೇಶಕ ನವೀನ್ ಅಗರವಾಲ್ ಅವರೊಂದಿಗೆ ಚರ್ಚಿಸಿ ಭಾರತೀಯ ಕ್ರಿಕೆಟಿಗೂ ಡೋಪಿಂಗ್ ಸಂಹಿತೆಯನ್ನು ಜಾರಿಗೊಳಿಸುವಂತೆ ನಿರ್ದೇಶಿಸಲಾಗಿದೆ ಎಂದು ಕ್ರೀಡಾ ಸಚಿವಾಲಯದ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ತಿಳಿಸಿದ್ದಾರೆ. 
ಭಾರತೀಯ ಕ್ರಿಕೆಟಿಗರನ್ನು ಡೋಪಿಂಗ್ ಟೆಸ್ಟ್ ಮಾಡಲು ಬಿಸಿಸಿಐ ವಿರೋಧ ವ್ಯಕ್ತಪಡಿಸಿದರೇ ಆಗ ನಾವು ಅದನ್ನು ಎದುರಿಸುತ್ತೇವೆ. ಸದ್ಯ ವಾಡಾ ಸಂಹಿತೆ ಪ್ರಕಾರ ಭಾರತೀಯ ಕ್ರಿಕೆಟಿಗರಿಗೆ ನಾಡಾ ಪರೀಕ್ಷೆಗಳನ್ನು ಮುಂದುವರೆಸುತ್ತದೆ ಎಂದು ಭಟ್ನಾಗರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com