ಮುಂಬಯಿ: ಮುಂಬೈ ಮತ್ತು ಕರ್ನಾಟಕ ರಣಜಿ ಟ್ರೋಫಿ ಮಾಜಿ ಕ್ರಿಕೆಟಿಗ ಶರದ್ ರಾವ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
60 ವರ್ಷದ ಬಲಗೈ ಮಧ್ಯಮ ವೇಗಿ ಮಾಜಿ ಆಟಗಾರರಾಗಿದ್ದ ಶರದ್ ರಾವ್ ಏಕನಾಥ ಸೋಲ್ಕರ್ ಅವರ ನೇತೃತ್ವದ ಬಾಂಬೆ ರಣಜಿ ಟ್ರೋಫಿ ತಂಡದಲ್ಲಿ ಆಡಿದ್ದರು, ಈ ತಂಡವು ಬಿಶನ್ ಸಿಂಗ್ ಬೇಡಿ ಅವರ ದೆಹಲಿ ತಂಡವನ್ನು 1980-81ರ ಫೈನಲ್ ನಲ್ಲಿ ಸೋಲಿಸಿತು.
1980-81 ರಿಂದ 1985-86 ರವರೆಗೆ ಅವರು ತಮ್ಮ ವೃತ್ತಿಜೀವನದಲ್ಲಿ ಪ್ರಥಮ ದರ್ಜೆಯ ಹತ್ತು ಪಂದ್ಯಗಳನ್ನು ಆಡಿದ್ದರು. ರಾವ್ ಈ ಸಮಯದಲ್ಲಿ 16 ವಿಕೆಟ್ ಗಳನ್ನು ಪಡೆದಿದ್ದರು, 27 ರನ್ ಗಳಿಗೆ 4 ವಿಕೆಟ್ ಗಳನ್ನು ಗಳಿಸಿ ಸಾಧನೆ ಮಾಡಿದ್ದರು.
ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ ಪರವಾಗಿ ರಾವ್ ಸಹ ಆಡಿದ್ದು ಸ್ಥಳೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕರ್ನಾಟಕ ಸ್ಪೋರ್ಟಿಂಗ್ ಅಸೋಸಿಯೇಷನ್ ಅನ್ನು ಪ್ರತಿನಿಧಿಸಿದ್ದರು.
ಇಂಟರ್ ಆಫೀಸ್ ಪಂದ್ಯಾವಳಿಗಳಲ್ಲಿ ಆಡಿದ್ದ ರಾವ್ ಟಾಟಾ ಸ್ಪೋರ್ಟ್ಸ್ ಕ್ಲಬ್ ಗಾಗಿ ಸಹ ಆಟವಾಡಿದ್ದರು.