ಹಾರ್ದಿಕ್ ಪಾಂಡ್ಯಾ ಮತ್ತು ಪರಿಣಿತಿ ಚೋಪ್ರಾ
ಕ್ರಿಕೆಟ್
ನಟಿ ಪರಿಣಿತಿ ಚೋಪ್ರಾ ಜೊತೆಗಿನ ಸಂಬಂಧದ ಬಗ್ಗೆ ಹಾರ್ದಿಕ್ ಪಾಂಡ್ಯ ಸ್ಪಷ್ಟನೆ
ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಟ್ವಿಟರ್ ಚಾಟ್ ಬಗ್ಗೆ ಸಾಕಷ್ಟು ಗಾಸಿಪ್ ಗಳು ಎದ್ದಿದ್ದವು, ಈ ಎಲ್ಲಾ ಗುಸುಗುಸುಗಳಿಗೂ ಸ್ವತಃ ...
ನವದೆಹಲಿ: ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಟ್ವಿಟರ್ ಚಾಟ್ ಬಗ್ಗೆ ಸಾಕಷ್ಟು ಗಾಸಿಪ್ ಗಳು ಎದ್ದಿದ್ದವು, ಈ ಎಲ್ಲಾ ಗುಸುಗುಸುಗಳಿಗೂ ಸ್ವತಃ ಹಾರ್ದಿಕ್ ಪಾಂಡ್ಯ ಮತ್ತು ಪರಿಣಿತಿ ಚೋಪ್ರಾ ತೆರೆ ಎಳೆದಿದ್ದಾರೆ.
ಇದೆಲ್ಲಾ ಅರ್ಥವಿಲ್ಲದ್ದು. ನಮ್ಮಿಬ್ಬರ ನಡುವೆ ಅಂತಹದ್ದು ಏನೂ ಇಲ್ಲ ಎಂದು ಹಾರ್ದಿಕ್ ಹೇಳಿದ್ದಾರೆ. ಇಂತಹ ರೂಮರ್ ಗಳಿಗೆಲ್ಲಾ ನನ್ನ ಬಳಿ ಉತ್ತರವಿಲ್ಲ. ನನಗೆ ಆಕೆಯನ್ನು ಸರಿಯಾಗಿ ಗೊತ್ತೇ ಇಲ್ಲ. ನಾವು ಟ್ವಿಟರ್ ಬಿಟ್ಟು, ಮುಖತಃ ಇದುವರೆಗೆ ಮಾತುಕತೆ ನಡೆಸಿಲ್ಲ ಎಂದು ಟೀಂ ಇಂಡಿಯಾ ಆಲ್ ರೌಂಡರ್ ಪ್ರತಿಕ್ರಿಯಿಸಿದ್ದಾರೆ.
ನನ್ನ ಬಳಿ ಎಲ್ಲವೂ ಇದೆ ಎಂದು ನನ್ನ ನೋಡಿದಾಗ ನಿಮಗೆ ಅನ್ನಿಸಬಹುದು, ಆದರೆ ದಿನಾಂತ್ಯದಲ್ಲಿ ನಾನೂ ಏನನ್ನೂ ಹೊಂದಿರದ ಮನುಷ್ಯನಾಗಿರುತ್ತೇನೆ. ನನಗೆ ಕ್ರಿಕೆಟ್ ಬಗ್ಗೆ ಗಮನ ಕೇಂದ್ರೀಕರಿಸುವ ಅವಶ್ಯಕತೆಯಿದೆ ಎಂದು ಪಾಂಡ್ಯಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಜನ ಹೇಗೆ ಟ್ವಿಟರ್ ಸಂಭಾಷಣೆ ನೋಡಿ ನಮ್ಮ ನಡುವೆ ಸಂಬಂಧ ಕಲ್ಪಿಸುತ್ತಾರೋ. ಎಂದು ಪ್ರಶ್ನಿಸಿದ್ದಾರೆ, ಇದೆಲ್ಲಾ ಮಾರ್ಕೆಟಿಂಗ್ ಗಿಮಿಕ್ ಎಂದು ಹೇಳಿದ್ದಾರೆ.
ಇನ್ನೂ ಈ ಗಾಸಿಪ್ ಬಗ್ಗೆ ಸೆಪ್ಟಂಬರ್ 3 ರಂದೇ ನಟಿ ಪರಿಣಿತಿ ಸ್ಪಷ್ಟನೆ ನೀಡಿದ್ದಾರೆ. ಟ್ವಿಟ್ಟರ್ ನಲ್ಲಿ ಸೆಲ್ಫೀ ವಿಡಿಯೋ ಅಪ್ ಲೋಡ್ ಮಾಡಿರುವ ಪರಿಣಿತಿ, ಅದ್ಬುತ ವ್ಯಕ್ತಿ ಎಂದರೇ ನನ್ನ ಹೊಸ ಮೊಬೈಲ್ . ಈ ವಿಚಾರವಾಗಿ ಯಾರೂ ಗೊಂದಲ ಪಡಬೇಕಿಲ್ಲ ಎಂದು ಎಲ್ಲಾ ವಿವಾದಗಳಿಗೂ ತೆರೆ ಎಳೆದಿದ್ದಾರೆ.
For all those who are curious about the on going rumours. Here's the real story behind my new partner
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ