ಧೋನಿ ನೇತೃತ್ವದ ಟೀಂ ಇಂಡಿಯಾ ಮೊದಲ ಟಿ20 ವಿಶ್ವಕಪ್ ಗೆದ್ದ ನೆನಪಿಗೆ ಒಂದು ದಶಕ!

ಸೆ.24, 2007, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಮೊದಲ ಟಿ20 ವಿಶ್ವಕಪ್ ಗೆದ್ದ ದಿನ. ಆ ನೆನಪಿಗೆ ಇಂದು 10 ವರ್ಷ ತುಂಬಿದೆ.
ಧೋನಿ ನೇತೃತ್ವದ ಟೀಂ ಇಂಡಿಯಾ ಮೊದಲ ಟಿ20 ವಿಶ್ವಕಪ್ ಗೆದ್ದ ನೆನಪಿಗೆ ಒಂದು ದಶಕ!
ಧೋನಿ ನೇತೃತ್ವದ ಟೀಂ ಇಂಡಿಯಾ ಮೊದಲ ಟಿ20 ವಿಶ್ವಕಪ್ ಗೆದ್ದ ನೆನಪಿಗೆ ಒಂದು ದಶಕ!
ನವದೆಹಲಿ: ಸೆ.24, 2007, ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಮೊದಲ ಟಿ20 ವಿಶ್ವಕಪ್ ಗೆದ್ದ ದಿನ. ಆ ನೆನಪಿಗೆ ಇಂದು 10 ವರ್ಷ ತುಂಬಿದೆ. 
ಜೋಹನ್ಸ್ಬರ್ಗ್ ನಲ್ಲಿ 10 ವರ್ಷಗಳ ಹಿಂದೆ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಭಾರತ ಮೊದಲ ಟಿ20 ವಿಶ್ವಕಪ್ ನ್ನು ತನ್ನ ಮುಡಿಗೇರಿಸಿಕೊಂಡಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಧೋನಿ ಪಡೆ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತ್ತು  
ಭಾರತ ನೀಡಿದ್ದ ಗುರಿಯನ್ನು ಬೆನ್ನಟ್ಟಿದ್ದ ಪಾಕಿಸ್ತಾನ 7 ವಿಕೆಟ್ ಗಳ ನಷ್ಟಕ್ಕೆ 104 ರನ್ ಗಳಿಸಿತ್ತು. ಈ ನಡುವೆ ಮಿಸ್ಬಾ-ಉಲ್-ಹಕ್ ಪಾಕಿಸ್ತಾನದ ಪರ ಉತ್ತಮವಾಗಿ ಆಡಿ, ತಂಡದ ಗೆಲುವಿನ ವಿಶ್ವಾಸವನ್ನು ಜೀವಂತವಾಗಿರಿಸಿದ್ದರು. ಆದರೆ ಕೊನೆಯಲ್ಲಿ ಮಹೇಂದ್ರ ಸಿಂಗ್ ಧೋನಿ ತಂತ್ರಗಾರಿಕೆಯ ಫಲವಾಗಿ ಭಾರತ 5 ರನ್ ಗಳ ಜಯ ಗಳಿಸಿ ಮೊದಲ ಟಿ20 ವಿಶ್ವಕಪ್ ನ್ನು ಗೆದ್ದುಕೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com