ಬಿಸಿಸಿಐ ಮಾಧ್ಯಮ ಪ್ರಸಾರ ಹಕ್ಕು: ಮೊದಲ ದಿನದ ಬಿಡ್ 4442 ಕೋಟಿಗೆ ಅಂತ್ಯ

2018-2023 ರ ವರೆಗೆ ನಡೆಯಲಿರುವ ಕ್ರಿಕೆಟ್ ಸರಣಿಗಳ ಪ್ರಸಾರ ಹಕ್ಕಿಗಾಗಿ ನಡೆಯುತ್ತಿರುವ ಇ-ಹರಾಜು ಪ್ರಕ್ರಿಯೆ ಮೊದಲ ದಿನದಂದು 4442 ಕೋಟಿ ರೂಪಾಯಿಗೆ ಅಂತ್ಯಗೊಂಡಿದೆ.
ಬಿಸಿಸಿಐ ಮಾಧ್ಯಮ ಪ್ರಸಾರ ಹಕ್ಕು: ಮೊದಲ ದಿನದ ಬಿಡ್ 4442 ಕೋಟಿಗೆ ಅಂತ್ಯ
ಬಿಸಿಸಿಐ ಮಾಧ್ಯಮ ಪ್ರಸಾರ ಹಕ್ಕು: ಮೊದಲ ದಿನದ ಬಿಡ್ 4442 ಕೋಟಿಗೆ ಅಂತ್ಯ
ನವದೆಹಲಿ: 2018-2023 ರ ವರೆಗೆ ನಡೆಯಲಿರುವ ಕ್ರಿಕೆಟ್ ಸರಣಿಗಳ ಪ್ರಸಾರ ಹಕ್ಕಿಗಾಗಿ ನಡೆಯುತ್ತಿರುವ ಇ-ಹರಾಜು ಪ್ರಕ್ರಿಯೆ ಮೊದಲ ದಿನದಂದು 4442 ಕೋಟಿ ರೂಪಾಯಿಗೆ ಅಂತ್ಯಗೊಂಡಿದೆ. 
ಮೊದಲ ಬಾರಿಗೆ ನಡೆದ ಇ-ಹಾರಜಿನ ಮೊದಲ ದಿನದಲ್ಲಿ ಸ್ಟಾರ್, ಸೋನಿ ಮತ್ತು ಜಿಯೋ ಸಲ್ಲಿಸಿದ್ದ ಬಿಡ್ ಮೌಲ್ಯ 4,442 ಕೋಟಿ ರೂಪಾಯಿಯಾಗಿದ್ದು,  ಈ ಹಿಂದೆ ಅಂದರೆ 2012 ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ನೆಟ್ ವರ್ಕ್ ಬಿಡ್ ಮಾಡಿದ್ದ 3851 ಕೋಟಿ ರೂ.ಗಿಂತ ಈಗಿನ ಬಿಡ್ ಶೇ.15 ಕ್ಕಿಂತಲೂ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. 
ಜಿಸಿಆರ್ ವಿಶ್ವಾದ್ಯಂತ ಪ್ರಸಾರವಾಗುವುದಷ್ಟೇ ಅಲ್ಲದೇ 102 ಪಂದ್ಯಗಳಿಗೆ ಡಿಜಿಟಲ್ ರೈಟ್ ಗಳನ್ನೂ ನೀಡಲಾಗಿದೆ. ಏ.04 ರಂದು ಬೆಳಿಗ್ಗೆ 2 ನೇ ದಿನದ ಹರಾಜು ಪ್ರಕ್ರಿಯೆ ನಡೆಯಲಿದ್ದು, ಮೂವರು ಬಿಡ್ಡರ್ ಗಳಿಗೂ ಪ್ರತ್ಯೇಕ ಲಾಗ್ ಇನ್ ಮೂಲಕ ಬಿಡ್ ಮಾಡಲು ಅವಕಾಶ ನೀಡಲಾಗಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com