ಕಳೆದ 2 ಪಂದ್ಯಗಳಿಗಿಂತ ಈ ಬಾರಿಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು 6 ವಿಕೆಟ್ ಗಳ ನಷ್ಟಕ್ಕೆ ನಿಗದಿತ 20 ಓವರ್ ಗಳಲ್ಲಿ 153 ರನ್ ಗಳಿಸಿತ್ತು. ಎದುರಾಳಿ ತಂಡ ನೀಡಿದ್ದ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಪಾಕಿಸ್ತಾನ ಕೇವಲ 16.5 ಓವರ್ ಗಳಲ್ಲಿ ಗುರಿ ತಲುಪಿದ್ದು ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್ ಗಳ ಜಯ ದಾಖಲಿಸಿ ಸರಣಿಯನ್ನು ತನ್ನದಾಗಿಸಿಕೊಂಡಿದೆ.