ಐಪಿಎಲ್ ಪಂದ್ಯಗಳು ದೂರದರ್ಶನದಲ್ಲೂ ಪ್ರಸಾರ: ಒಟ್ಟು ಗಳಿಕೆಯಲ್ಲಿ ಡಿಡಿಗೆ ಶೇ. 50ರಷ್ಟು ಪಾಲು?

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ಮಹಾ ಸಮರಕ್ಕೆ ಕೆಲ ದಿನಗಳು ಬಾಕಿಯಿದ್ದು ಈ ಮಧ್ಯೆ ಸ್ಟಾರ್ ಇಂಡಿಯಾ ತನ್ನ ಹಂಚಿಕೆ ಹಕ್ಕನ್ನು ಪ್ರಸಾರ...
ಐಪಿಎಲ್ 2018
ಐಪಿಎಲ್ 2018
ಮುಂಬೈ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ಮಹಾ ಸಮರಕ್ಕೆ ಕೆಲ ದಿನಗಳು ಬಾಕಿಯಿದ್ದು ಈ ಮಧ್ಯೆ ಸ್ಟಾರ್ ಇಂಡಿಯಾ ತನ್ನ ಹಂಚಿಕೆ ಹಕ್ಕನ್ನು ಪ್ರಸಾರ ಭಾರತಿ ಜತೆ ಹಂಚಿಕೆ ಮಾಡಿಕೊಳ್ಳಲಿದ್ದು ಇದರಿಂದ ಆದಾಯದಲ್ಲಿನ ಶೇಖಡ 50ರಷ್ಟು ಭಾಗ ದೂರದರ್ಶನ ಗಳಿಸುವ ಸಾಧ್ಯತೆ ಇದೆ. 
ಸ್ಟಾರ್ ಇಂಡಿಯಾ ಬರೋಬ್ಬರಿ 16,347.50 ಕೋಟಿ ರುಪಾಯಿ ನೀಡಿ ಈಗಾಗಲೇ ಐಪಿಎಲ್ ನ ಪ್ರಸಾರ ಹಕ್ಕು ಪಡೆದುಕೊಂಡಿದೆ. 2007ರ ಸ್ಪೋರ್ಟ್ಸ್ ಬ್ರಾಡ್ ಕಾಸ್ಟಿಂಗ್ ಸಿಗ್ನಲ್ ನಿಯಮದ ಪ್ರಕಾರ ಎಲ್ಲ ಖಾಸಗಿ ಪ್ರಸಾರಕರು ಪ್ರಸಾರ ಭಾರತೀಯೊಂದಿಗೆ ತಮ್ಮ ನೇರ ಪ್ರಸಾರದ ಹಕ್ಕು ಹಂಚಿಕೊಳ್ಳಬಹುದಾಗಿದೆ. 
ಕಲೆ ಮೂಲಗಳ ಪ್ರಕಾರ, ಐಪಿಎಲ್ ಉದ್ಘಾಟನಾ ಸಮಾರಂಭ, ಮುಕ್ತಾಯ ಹಾಗೂ ಕೆಲವೊಂದು ಹೈವೊಲ್ಟೇಜ್ ಪಂದ್ಯಗಳ ನೇರ ಪ್ರಸಾರ ದೂರದರ್ಶನದಲ್ಲಿ ಪ್ರಸಾರವಾಗಲಿದೆ. 
ಸದ್ಯ ಸ್ಟಾರ್ ಇಂಡಿಯಾ ಆದಾಯದ ಗಳಿಕೆಯಲ್ಲಿ 75-25ರಷ್ಟು ಹಂಚಿಕೊಳ್ಳುವ ಬೇಡಿಕೆಯನ್ನು ಮುಂದಿಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com