ಕೆಕೆಆರ್ ಸೋಲಿಗೆ ಕನ್ನಡಿಗ ವಿನಯ್ ವಿರುದ್ಧ ಟೀಕೆ: ಟೀಕಾಕಾರರಿಗೆ ತಿರುಗೇಟು ನೀಡಿದ ವಿನಯ್

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸೋಲಿಗೆ ಕಾರಣರಾದ ಕನ್ನಡಿಗ ಆರ್ ವಿನಯ್ ಕುಮಾರ್ ಅವರನ್ನು ಟ್ವೀಟರಿಗರು ಟ್ರೋಲ್...
ವಿನಯ್ ಕುಮಾರ್
ವಿನಯ್ ಕುಮಾರ್
Updated on
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಸೋಲಿಗೆ ಕಾರಣರಾದ ಕನ್ನಡಿಗ ಆರ್ ವಿನಯ್ ಕುಮಾರ್ ಅವರನ್ನು ಟ್ವೀಟರಿಗರು ಟ್ರೋಲ್ ಮಾಡಿದ್ದು ಅದಕ್ಕೆ ವಿನಯ್ ಕುಮಾರ್ ಟ್ವೀಟ್ ಮೂಲಕ ಉತ್ತರ ಕೊಟ್ಟಿದ್ದಾರೆ. 
ಇದು ಕೇವಲ ಒಂದು ಪಂದ್ಯವಷ್ಟೇ. ಆರ್ಸಿಬಿ ವಿರುದ್ಧ ಕೊನೆಯ ಓವರ್ ನಲ್ಲಿ 9 ರನ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ 10 ರನ್ ಗಳನ್ನು ಸಮರ್ಥಿಸಿಕೊಂಡು ನಾನು ಪಂದ್ಯ ಗೆಲ್ಲಿಸಿದ್ದಾಗ ನೀವೆಲ್ಲಾ ಎಲ್ಲಿದ್ದಿರಿ? ಕೆಲವೊಮ್ಮೆ ಪರಿಸ್ಥಿತಿ ನಮ್ಮ ವಿರುದ್ಧವಾಗಿ ಹೋಗುತ್ತದೆ ಎಂದು ವಿನಯ್ ಕುಮಾರ್ ಟ್ವೀಟ್ ಮಾಡಿದ್ದಾರೆ. 
ಮಂಗಳವಾರ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಚೆನ್ನೈ ವಿರುದ್ಧ ಕೆಕೆಆರ್ ಗೆಲುವು ಕೈಚೆಲ್ಲಿ ಸೋಲು ಕಂಡಿತ್ತು. ಕೊನೆಯ ಓವರ್ ನಲ್ಲಿ ಸಿಎಸ್ಕೆಗೆ 17 ರನ್ ಗಳು ಬೇಕಿದ್ದಾಗ ಅಂತಿಮ ಓವರ್ ಮಾಡಿದ್ದ ವಿನಯ್ ಕುಮಾರ್ 19 ರನ್ ಬಿಟ್ಟು ಕೊಟ್ಟು ಪಂದ್ಯ ಸೋಲಿಗೆ ಕಾರಣರಾಗಿದ್ದರು. 
ಕೊನೆಯ ಓವರ್ ನಲ್ಲಿ ಕೆಕೆಆರ್ ಗೆ ಪಂದ್ಯ ಗೆದ್ದುಕೊಡಲು ವಿಫಲರಾದ ವಿನಯ್ ಕುಮಾರ್ ಅವರನ್ನು ಗುರಿಯಾಗಿಟ್ಟುಕೊಂಡು ಟ್ವೀಟರಿಗರು ಟೀಕಾ ಪ್ರವಾಹವನ್ನೇ ಹರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com