ನಾನು ಚಿಕ್ಕವನಿದ್ದಾಗ ಬೌಲಿಂಗ್ ಮಾಡುವುದು ಸುಲಭವಾಗಿತ್ತು, ಈಗ ಹಾಗಿಲ್ಲ: ಸ್ಪಿನ್ ದಂತಕಥೆ ಮುತ್ತಯ್ಯ ಮುರಳಿಧರನ್

"ಯುವಕರಾಗಿದ್ದಾಗ ಬೌಲಿಂಗ್ ನನಗೆ ಕಷ್ಟವೆನಿಸಿರಲಿಲ್ಲ. ನಾವು ಆಟವಾಡುವಾಗ ಬೌಲಿಂಗ್ ಸುಲಭವಿತ್ತು. ಈಗ ಬೌಲ್ ಮಾಡುವುದು ಸುಲಭವಲ್ಲ "
ಮುತ್ತಯ್ಯ ಮುರಳೀಧರನ್
ಮುತ್ತಯ್ಯ ಮುರಳೀಧರನ್
ಕೋಲ್ಕತ್ತಾ: "ಯುವಕರಾಗಿದ್ದಾಗ ಬೌಲಿಂಗ್ ನನಗೆ ಕಷ್ಟವೆನಿಸಿರಲಿಲ್ಲ. ನಾವು ಆಟವಾಡುವಾಗ ಬೌಲಿಂಗ್ ಸುಲಭವಿತ್ತು. ಈಗ ಬೌಲ್ ಮಾಡುವುದು ಸುಲಭವಲ್ಲ " ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ಗಳಿಕೆಯ ಶ್ರೀಲಂಕಾ ಪ್ರಸಿದ್ದ ಕ್ರಿಕೆಟಿಗ ಮುತ್ತಯ್ಯ ಮುರಳಿಧರನ್ ಹೇಳಿದರು.
"ನಾವು ಹೆಚ್ಚು ಟಿ20  ಪಂದ್ಯವಾಡಿಲ್ಲ. ಈಗಿನವರಂತೆ ಹೆಚ್ಚು ಸಿಕ್ಸರ್ ಹೊಡೆದಿಲ್ಲ. ಈಗ ಆಟ ವಿಕಸನಗೊಂಡಿದೆ" ಅವರು ಹೇಳಿದ್ದಾರೆ.
133 ಪಂದ್ಯಗಳಿಂದ 800 ಟೆಸ್ಟ್ ವಿಕೆಟ್ ಪಡೆದ ಮುರಳಿಧರನ್ 1996 ರ ವಿಶ್ವಕಪ್ ಗೆದ್ದ ಕ್ಷಣ ಅವರ ವೃತ್ತಿಜೀವನದಲ್ಲಿ ಅತ್ಯುತ್ತಮ ಕ್ಷಣವಾಗಿದೆ ಎಂದು ಹೇಳಿದರು."1996 ರ ವಿಶ್ವ ಕಪ್ ಜಯವನ್ನು ನಾನು ಸಂಭ್ರಮಿಸುತ್ತೇನೆ ಏಕೆಂದರೆ ಅದು ಶ್ರೀಲಂಕಾದ ಕ್ರಿಕೆಟ್ ಗೆ ಬಹಳ ಮುಖ್ಯವಾದುದು."
ರೂಪಾ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಶ್ರೀಲಂಕಾ ಬೌಲರ್ ಮುರಳಿಧರನ್ ಬಾಗವಹಿಸಿದ್ದರು. ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಭಾರತದ ಕ್ರಿಕೆಟಿಗ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ಕೌಟುಂಬಿಕ ವ್ಯವಹಾರದಲ್ಲಿ ತೊಡಗಿಕೊಳ್ಳುವುದಾಗಿ ಹೇಳಿದ್ದಾರೆ. ಸನ್ ರೈಸರ್ಸ್ ತಂಡದ  ನಾಯಕ ಕೇನ್ ವಿಲಿಯಮ್ಸನ್ ತಮ್ಮ ಹದಿಹರೆಯದ ದಿನಗಳಲ್ಲಿ ಸಚಿನ್ ತೆಂಡುಲ್ಕರ್ ಅವರನ್ನು ಆರಾಧಿಸುತ್ತಿದ್ದದ್ದಾಗಿ ನೆನೆಸಿದರು.
ಭಾರತವು 2010 ರಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾಗ ವಿಲ್ಲಿಯನ್ಸನ್ ಮೊಟ್ಟ ಮೊದಲ ಬಾರಿಗೆ ಸಚಿನ್ ಅವರನ್ನು ಭೇಟಿಯಾಗಿದ್ದರು."ಎದುರಾಳಿಯ ಶಿಬಿರದಲ್ಲಿ ಅವರನ್ನು ಕಾಣಲು ಬಹಳ ಅಡೆತಡೆಗಳಿದ್ದವು. ಕ್ರೀಡಾಂಗಣದಲ್ಲಿ ನಾನು ಅವರ ಆಟ ವೀಕ್ಷಿಸುತ್ತಿದ್ದೆ. ಅವರು ಹೇಗೆ ಅಷ್ಟು ಚೆನ್ನಾಗಿ ಆಡುವರೆನ್ನುವುದು ಅನನಗೆ ತಿಳಿಯಬೇಕಿತ್ತು. ಇದು ನಿಜವಾಗಿಯೂ ಉತ್ತಮ ಅನುಭವ" ಎಂದು ವಿಲಿಯಮ್ಸನ್ ಹೇಳಿದರು.
ನಾನಾಗ  19 ಅಥವಾ 20 ವರ್ಷ ವಯಸ್ಸಿನವನಾಗಿದ್ದೆ ಕ್ರಿಕೆಟ್ ದಂತಕಥೆ ಸಚಿನ್, ದ್ರಾವಿಡ್,  ವಿವಿಎಸ್ ಲಕ್ಷ್ಮಣ್ ತಂಡದಲ್ಲಿದ್ದರು ಇಂತಹ ಅದ್ಭುತ ಜನರು ಮತ್ತು ಆಟದ ಬಗ್ಗೆ ಮಾತನಾಡಲು ಬಹಳ ಇಷ್ಟವಾಗುತ್ತದೆ" ಅವರು ಹೇಳಿದ್ದಾರೆ.
ಶಿಖರ್ ಧವನ್ ಮಾತನಾಡಿ "ನಾನು ಯಾವಾಗಲೂ ಕ್ರಿಕೆಟ್ ಅನ್ನು ಪ್ರೀತಿಸುತ್ತೇನೆ. ಕ್ರಿಕೆಟ್ ಬದುಕಿನ ಬಳಿಕ ತಾನು ನನ್ನ ತಂದೆಯ ವ್ಯ್ವಹಾರದಲ್ಲಿ ತೊಡಗಿಕೊಳ್ಳಲಿದ್ದೇನೆ.ಪಂಜಾಬಿಗಳು ತಮ್ಮ ವ್ಯವಹಾರವನ್ನು ಪ್ರೀತಿಸುತ್ತಾರೆ. ಇದು ನಮ್ಮ ರಕ್ತದಲ್ಲಿದೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com