ಐಪಿಎಲ್ 2018: ಡಕ್ವರ್ತ್ ನಿಯಮದ ಬಗ್ಗೆ ದಿನೇಶ್ ಕಾರ್ತಿಕ್ ಅಪಸ್ಪರ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದನ್ವಯ 9 ವಿಕೆಟ್ ಸೋಲು ಅನುಭವಿಸಿದ ಬಳಿಕ...
ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್
ಕೋಲ್ಕತ್ತಾ: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡಕ್ವರ್ತ್ ಲೂಯಿಸ್ ನಿಯಮದನ್ವಯ 9 ವಿಕೆಟ್ ಸೋಲು ಅನುಭವಿಸಿದ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ದಿನೇಶ್ ಕಾರ್ತಿಕ್ ನಿಯಮವನ್ನು ಪ್ರಶ್ನಿಸಿದ್ದಾರೆ. 
ಡಕ್ವರ್ತ್ ಲೂಯಿಸ್ ನಿಯಮ ಗೊಂದಲಕಾರಿ ಎನಿಸಿದೆ. ಇದರ ಬದಲು ಭಾರತೀಯರೇ ಕಂಡು ಹಿಡಿದಿರುವ ಸುಲಭ ಹಾಗೂ ನ್ಯಾಯ ಸಮ್ಮತವಾಗಿರುವ ಜಯದೇವನ್(ವಿಜೆಡಿ) ಪದ್ಧತಿಯನ್ನೇಕೆ ಅಳವಡಿಸಬಾರದು ಎಂದು ದಿನೇಶ್ ಕಾರ್ತಿಕ್ ಪ್ರಶ್ನಿಸಿದ್ದಾರೆ. 
ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ನಂತರ ಪಂಜಾಬ್ ಎಸೆತಕ್ಕೆ ಒಂದು ರನ್ ನಂತೆ ಗುರಿ ಪಡೆದುಕೊಂಡಿತ್ತು. ಡಕ್ವರ್ತ್ ಲೂಯಿಸ್ ನಿಯಮ ಯಾವ ಆಧಾರದಿಂದ ಕೂಡಿದೆ ಎನ್ನುವುದೇ ಅರ್ಥವಾಗುವುದಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com