ಐಪಿಎಲ್: 8.4 ಕೋಟಿ ರೂ. ಗೆ ಜಯದೇವ್ ಉನದ್ಕಟ್ ರಾಜಸ್ಥಾನ ರಾಯಲ್ಸ್ ಪಾಲು, ನಿರೀಕ್ಷೆಯಲ್ಲಿ ಯುವರಾಜ್ ಸಿಂಗ್

ಬಹುನಿರೀಕ್ಷಿತ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಜೈಪುರದಲ್ಲಿ ನಡೆಯುತ್ತಿದ್ದು, ಎಡಗೈ ವೇಗಿ ಜಯದೇವ್ ಉನದ್ಕಟ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ 8.4 ಕೋಟಿ ರೂ. ಗೆ ಮಾರಾಟವಾಗಿದ್ದಾರೆ
ಜಯದೇವ್ ಉನದ್ಕಟ್
ಜಯದೇವ್ ಉನದ್ಕಟ್

ಜೈಪುರ: ಬಹುನಿರೀಕ್ಷಿತ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಜೈಪುರದಲ್ಲಿ ನಡೆದಿದ್ದು, ಎಡಗೈ ವೇಗಿ ಜಯದೇವ್ ಉನದ್ಕಟ್ ರಾಜಸ್ಥಾನ ರಾಯಲ್ಸ್ ತಂಡಕ್ಕೆ 8.4 ಕೋಟಿ ರೂ. ಗೆ. ಮಾರಾಟವಾಗಿದ್ದಾರೆ. ಆರು ಬಾರಿ ಅವರ ಮೂಲ ಬೆಲೆ 1.5 ಕೋಟಿ ಆಗಿತ್ತು.

ಇದಕ್ಕೂ ಮುನ್ನಾ ಆಲ್ ರೌಂಡರ್ ಅಕ್ಷರ್ ಪಟೇಲ್, 5 ಕೋಟಿ ರೂ. ಗೆ ದೆಹಲಿ ತಂಡಕ್ಕೆ ಬಿಕರಿಯಾದರು. ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಕಾರ್ಲಸ್ ಬ್ರಾತ್ ವೇಟ್ ಕೂಡ 5 ಕೋಟಿ ರೂಪಾಯಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪಾಲಾದರು.

ಆದರೆ, ಕಳೆದ ಬಾರಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿದ್ದ ಯುವರಾಜ್ ಸಿಂಗ್ ಕಳಪೆ ಪ್ರದರ್ಶನದಿಂದಾಗಿ ಈ ಬಾರಿ ಮಾರಾಟವಾಗದೆ ಹಾಗೆ ಉಳಿದಿದ್ದಾರೆ. ಶಿರ್ಮಾನ್ ಹೆಟ್ಮೈರ್  4.2 ಕೋಟಿ ರೂಗೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾರಾಟವಾಗಿದ್ದಾರೆ.

ವೆಸ್ಟ್ ಇಂಡೀಸ್ ನ ಮತ್ತೊಬ್ಬ ಆಟಗಾರ  ನಿಕೊಲಾಸ್  ಪೂರಾನ್ ಕೂಡಾ 4.2 ಕೋಟಿಗೆ ಕಿಂಗ್ಸ್ ಇಲೆವೆನ್ಸ್ ಪಂಜಾಬ್ ತಂಡಕ್ಕೆ ಬಿಕರಿಯಾಗಿದ್ದಾರೆ. ಈ ಮಧ್ಯೆ ಇಂಗ್ಲೆಂಡ್ ವಿಕೆಟ್ ಕೀಪರ್ ಜಾನಿ ಬೈರ್ ಸ್ಟಾ 2.2 ಕೋಟಿಗೆ ಹೈದ್ರಾಬಾದ್ ಸನ್ ರೈಸರ್ಸ್ ತಂಡಕ್ಕೆ ಸೇಲ್ ಆಗಿದ್ದಾರೆ.
ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ವೃದ್ದಿಮಾನ್ ಸಹಾ 1.2 ಕೋಟಿಗೆ  ಹೈದ್ರಾಬಾದ್ ಸನ್ ರೈಸರ್ಸ್ ತಂಡಕ್ಕೆ ಮಾರಾಟವಾಗಿದ್ದಾರೆ. ಮುಂಬೈನ ಆಲ್ ರೌಂಡರ್ ಶಿವಂ ದುಬೆ 5 ಕೋಟಿ ರೂಪಾಯಿಗೆ ಬೆಂಗಳೂರು ರಾಯಲ್ ಚಾಲೆಂಜರ್ಸ್  ತಂಡದ ಪಾಲಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com