ಚುನಾವಣೆಯಲ್ಲಿ ಭರ್ಜರಿ ಅಂತರದಿಂದ ಗೆದ್ದ ಬಾಂಗ್ಲಾ ಕ್ರಿಕೆಟ್ ಟೀಂ ನಾಯಕ!

ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾ ಕ್ರಿಕೆಟ್ ತಂಡದ ನಾಯಕ ಮಶ್ರಫೆ ಬಿನ್ ಮೊರ್ತಾಜ್ ಚುನಾವಣೆಗೆ ಸ್ಪರ್ಧಿಸಿ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಮಶ್ರಫೆ ಮೊರ್ತಾಜ್
ಮಶ್ರಫೆ ಮೊರ್ತಾಜ್
ಢಾಕಾ: ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾ ಕ್ರಿಕೆಟ್ ತಂಡದ ನಾಯಕ ಮಶ್ರಫೆ ಬಿನ್ ಮೊರ್ತಾಜ್ ಚುನಾವಣೆಗೆ ಸ್ಪರ್ಧಿಸಿ ಭರ್ಜರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. 
ಮಶ್ರಫೆ ಅವರು ಅವಾಮಿ ಲೀಗ್ ಪಕ್ಷದಿಂದ ಸ್ಪರ್ಧಿಸಿದ್ದರು. ಮಶ್ರಫೆ ಒಟ್ಟು 274418 ಮತಗಳನ್ನು ಪಡೆದಿದ್ದು ಅವರ ಪ್ರತಿಸ್ಪರ್ಧಿ ಜಾತಿಯಾ ಒಕಿಯಾ ಫ್ರಂಟ್ ಅಭ್ಯರ್ಥಿ ಅಜಂ ಡಾ ಫರೀದ್ ದುಜ್ಜಾಮನ್ ಕೇವಲ 8006 ಮತಗಳನ್ನು ಪಡೆದಿದ್ದಾರೆ. 
ನರೈಲ್ 2 ಅಸೆಂಬ್ಲಿ ಕ್ಷೇತ್ರದಲ್ಲಿ ಒಟ್ಟು 317844 ಮತದಾರರಿದ್ದಾರೆ. ಈ ಭಾಗದಲ್ಲಿ ಶೇಖಕ 96ರಷ್ಟು ಮತದಾನವಾಗಿದ್ದು ಅತಿ ಹೆಚ್ಚು ಮತಗಳನ್ನು ಮೆರ್ತಾಜ್ ಪಡೆದುಕೊಂಡಿದ್ದಾರೆ.
ಬಾಂಗ್ಲಾದೇಶ ತಂಡದ ನಾಯಕರಾಗಿದ್ದ ನೈಮೂರ್ ರೆಹಮಾನ್ ದುರ್ ಜಾಯ್ ಈ ಹಿಂದೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಎಂಪಿಯಾಗಿ ಆಯ್ಕೆಯಾಗಿದ್ದರು. ಇದೀಗ ಮೊರ್ತಾಜ್ ಸಹ ಆಯ್ಕೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com