ದಿಪೀಲ್ ವೆಂಗ್ಸರ್ಕರ್-ಸಂಜಯ್ ಮಂಜ್ರೇಕರ್
ಕ್ರಿಕೆಟ್
ಸಚಿನ್, ಸಂಜಯ್ ಹೇಳಿದ ದೆವ್ವದ ಕಥೆ ಕೇಳಿ ಹೆದರಿದ್ದ ವೆಂಗ್ಸರ್ಕರ್... ಮುಂದೇನಾಯ್ತು!
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಸಂಜಯ್ ಮಾಂಜ್ರೇಕರ್ ಇಬ್ಬರು ಸೇರಿ ದಿಲೀಪ್ ವೆಂಗ್ಸರ್ಕರ್ ಅವರಿಗೆ ದೆವ್ವದ ಕಥೆ ಹೇಳಿ ಹೆದರಿಸಿದ್ದ ಎಂಬ ಇದೀಗ ಬಯಲಾಗಿದೆ...
ಬೆಂಗಳೂರು: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಸಂಜಯ್ ಮಾಂಜ್ರೇಕರ್ ಇಬ್ಬರು ಸೇರಿ ದಿಲೀಪ್ ವೆಂಗ್ಸರ್ಕರ್ ಅವರಿಗೆ ದೆವ್ವದ ಕಥೆ ಹೇಳಿ ಹೆದರಿಸಿದ್ದ ಎಂಬ ಇದೀಗ ಬಯಲಾಗಿದೆ.
ಸಂಜಯ್ ಮಾಂಜ್ರೇಕರ್ ತಮ್ಮ ಆತ್ಮಚರಿತ್ರೆ ಐ ಆ್ಯಮ್ ಪರ್ಫೆಕ್ಟ್ ಪುಸ್ತಕದಲ್ಲಿ ದಿಲೀಪ್ ವೆಂಗ್ಸರ್ಕರ್ ನಾಯಕತ್ವದಲ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ನಡೆದ ಘಟನೆಯನ್ನು ಅತ್ಯಂತ ರಸವತ್ತಾಗಿ ವರ್ಣಿಸಿದ್ದಾರೆ.
ವೆಂಗ್ಸರ್ಕರ್ ವಯಸ್ಸಿನಲ್ಲಿ ನಮಗಿಂತ ದೊಡ್ಡವರಾದರೂ ನಮ್ಮ ಜತೆ ಬೆರೆಯುತ್ತಿದ್ದರು. ಟೀಂ ಇಂಡಿಯಾದಲ್ಲಿ ಅವರು ಹಿರಿಯ ಆಟಗಾರನಾಗಿದ್ದರಿಂದ ಅವರಿಗೆ ಪ್ರತ್ಯೇಕ ಕೊಠಡಿಯನ್ನು ನೀಡಲಾಗಿತ್ತು. ಆದರೆ ಅವರು ರಾತ್ರಿ ತಮ್ಮ ಕೊಠಡಿಯಲ್ಲಿ ಒಬ್ಬರೇ ಮಲಗಲು ಹೆದರುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.
ನ್ಯೂಜಿಲೆಂಡ್ ನಲ್ಲಿ ನಾವು ತಂಗಿದ್ದ ರೆಸಾರ್ಟ್ ಮರಗಳಿಂದ ಸುತ್ತುವರಿದಿತ್ತು ಮತ್ತು ಸ್ತಬ್ಧವಾಗಿತ್ತು. ನಾವು ಮೂವರು ರಾತ್ರಿ ಊಟದ ನಂತರ ವಾಕಿಂಗ್ ಗೆ ಹೊರಗೆ ಹೊರಟೆವು. ನಾನು ಸಚಿನ್ ಮೊದಲೆ ವೆಂಗ್ಸರ್ಕರ್ ಅವರಿಗೆ ದೆವ್ವದ ಕಥೆ ಹೇಳಿ ಹೆದರಿಸೋಣ ಎಂದು ಮಾತನಾಡಿಕೊಂಡಿದ್ದೇವು. ಅದರಂತೆ ನಾನು ಸಚಿನ್ ಗೆ ನೀನು ರಾತ್ರಿ ಇಲ್ಲಿ ನೋಡಿದ ಬಿಳಿ ಸೀರೆಯುಟ್ಟ ಮಹಿಳೆಯರ ಬಗ್ಗೆ ಹೇಳು ಎಂದೆ. ನನ್ನ ಉದ್ದೇಶವನ್ನು ಅರಿತ ಸಚಿನ್ ಕೂಡಲೇ ದೆವ್ವದ ಬಗ್ಗೆ ಏನೇನೋ ಕತೆ ಕಟ್ಟಿದರು.
ಇದರಿಂದ ಹೆದರಿದ ವೆಂಗ್ಸರ್ಕರ್ ಅವರು ತಮ್ಮ ಕೋಣೆಯಲ್ಲಿ ಒಬ್ಬರೇ ಮಲಗಲು ಹೆದರಿದ್ದು 10 ನಿಮಿಷಗಳ ನಂತರ ನಮ್ಮ ಕೋಣೆಗೆ ಬಂದು ರಾತ್ರಿ ನಾನು ಇಲ್ಲೇ ಮಲಗುತ್ತೇನೆ ಎಂದು ಹೇಳಿ ಅಲ್ಲೇ ಮಲಗಿದರು ಎಂದು ಮಾಂಜ್ರೇಕರ್ ಹೇಳಿದ್ದಾರೆ.

