ಐಸಿಸಿ ಮೊದಲ ಮಹಿಳಾ ಸ್ವತಂತ್ರ ನಿರ್ದೇಶಕಿಯಾಗಿ ಇಂದ್ರಾ ನೂಯಿ ನೇಮಕ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಸ್ವತಂತ್ರ ನಿರ್ದೇಶಕಿಯಾಗಿ ನೇಮಕ ಮಾಡಿದೆ.
ಇಂದ್ರಾ ನೂಯಿ
ಇಂದ್ರಾ ನೂಯಿ
ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರನ್ನು ಸ್ವತಂತ್ರ ನಿರ್ದೇಶಕಿಯಾಗಿ ನೇಮಕ ಮಾಡಿದೆ. ಪೆಪ್ಸಿ ಕೊ ಸಂಸ್ಥೆಯ  ಅಧ್ಯಕ್ಷೆ ಹಾಗೂ ಸಿಇಓ ಆಗಿರುವ ಇಂದ್ರಾ ನೂಯಿ ಐಸಿಸಿಯ ಪ್ರಥಮ ಸ್ವತಂತ್ರ ಮಹಿಳಾ ನಿರ್ದೇಶಕಿ ಎನಿಸಿದ್ದಾರೆ.
ನೂಯಿ 2018ರ ಜೂನ್ ನಲ್ಲಿ ವಿಶ್ವ ಕ್ರಿಕೆಟ್ ಆಡಳಿತ ಮಂಡಳಿಗೆ ಸೇರುವವರಿದ್ದಾರೆ. ಇವರು ಮಂಡಳಿಯ ಸ್ವತಂತ್ರ ನಿರ್ದೇಶಕಿಯಾಗಿ ಅಧಿಕಾರ ಸ್ವೀಕರಿಸುವವರಿದ್ದು  ಈಬಾರಿ ನಿರ್ದೇಶಕಿಯಾಗಿ ನೇಮಕವಾಗುವವರು ಮಹಿಳೆಯೇ ಆಗಿರಬೇಕೆಂದು 2017ರ ಐಸಿಸಿ ಫುಲ್ ಕೌನ್ಸಿಲ್ಸಭೆಯಲ್ಲಿ ತೀರ್ಮಾನವಾಗಿತ್ತು.  ಕ್ರಿಕೆಟ್ ನ ಜಾಗತಿಕ ಆಡಳಿತ ಸುಧಾರಣೆ ನಿಟ್ಟಿನಲ್ಲಿ ಸಂವಿಧಾನ ಮಾರ್ಪಾಡಿನ ಒಂದು ಭಾಗವಾಗಿ ಈ ನೇಮಕ ಪ್ರಕ್ರಿಯೆ ನಡೆದಿದೆ.
"ಇಂದ್ರಾ ನೂಯಿಯನ್ನು ಐಸಿಸಿಗೆ ಸ್ವಾಗತಿಸಲು ನಾವು ಸಂತಸಪಡುತ್ತೇವೆ. ವಿಶೇಷವಾಗಿ ಮಹಿಳೆಯೊಬ್ಬಳ ನೇಮಕದಿಂಡ ನಮ್ಮ ಆಡಳಿತವನ್ನು ಸುಧಾರಿಸುವಲ್ಲಿ ಪ್ರಮುಖ ಹೆಜ್ಜೆ ಇಟ್ಟಿದ್ದೇವೆ. ವಿಶ್ವದ ಅತಿ ದೊಡ್ಡ ಉದ್ಯಮವೊಂದನ್ನು ನಡೆಸುತ್ತಿರುವ ಇಂದ್ರಾ ನೂಯಿ ಕ್ರಿಕೆಟ್ ಮಂಡಳಿಗೆ ಸೇರುವುದರಿಂದ ಕ್ರಿಕೆಟ್ ಆಡಳಿತಕ್ಕೆಹೊಸ ಬಲ ಬರಲಿದೆ." ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಹೇಳಿದ್ದಾರೆ.
"ನಾನು ಕ್ರಿಕೆಟ್ ಆಟವನ್ನು ಪ್ರೀತಿಸುತ್ತೇನೆ ನಾನು ಚಿಕ್ಕವಳಿದ್ದಾಗ ಕಾಲೇಜಿನಲ್ಲಿ ಆಡಿದ್ದೇನೆ ಮತ್ತು ಇದರಿಂದ ನಾನು ತಂಡವೊಂದರ ಭಾಗವಾಗಿ ಹೇಗೆ ಕೆಲಸ ಮಾಡಬಹುದೆಂದು ಕಲಿತಿದ್ದೇನೆ. ಇದೀಗ ನನಗೆ ಮಂಡಳಿಯ ನಿರ್ದೇಶಕಿಯಾಗಲು ಅವಕಾಶ ನಿಡಿದ್ದು ಮಂಡಳಿಯ ಸಹೋದ್ಯೋಗಿಗಳೊಡನೆ ಕೆಲಸ ಮಿರ್ವಹಣೆಗಾಗಿ ಎದುರು ನೋಡುತ್ತಿದ್ದೇನೆ. " ಪೆಪ್ಸಿ ಕೊ ಅಧ್ಯಕ್ಷೆ ಇಂದ್ರಾ ನೂಯಿ ಹೇಳಿದ್ದಾರೆ.
ಸ್ವತಂತ್ರ ನಿರ್ದೇಶಕವನ್ನು ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗುತ್ತಿದ್ದರೂ, ಆರು ವರ್ಷಗಳ ಸತತ ಅವಧಿ ವಿಸ್ತರಣೆಗೆ ಅವಕಾಶಗಳಿದ್ದು ನೂಯಿ ಅಲ್ಲಿಯವರೆಗೂ ಅಧಿಕಾರದಲ್ಲಿ ಮುಂದುವರಿಯುವ ಸಾಧ್ಯತೆಗಳಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com