ಟೀಂ ಇಂಡಿಯಾ ಆಟಗಾರ್ತಿ ಹರ್ಮನ್‌ಪ್ರೀತ್ ಕೌರ್ ಪೊಲೀಸ್‌ ಉಪ ವರಿಷ್ಠಾಧಿಕಾರಿ!

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡವನ್ನು ಫೈನಲ್ ವರೆಗೆ ಕೊಂಡೊಯ್ಯಲು...
ಸುರೇಶ್ ಅರೋರಾ-ಹರ್ಮನ್‌ಪ್ರೀತ್ ಕೌರ್-ಅಮರೀಂದರ್ ಸಿಂಗ್
ಸುರೇಶ್ ಅರೋರಾ-ಹರ್ಮನ್‌ಪ್ರೀತ್ ಕೌರ್-ಅಮರೀಂದರ್ ಸಿಂಗ್
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಮಹಿಳಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡವನ್ನು ಫೈನಲ್ ವರೆಗೆ ಕೊಂಡೊಯ್ಯಲು ಪ್ರಮುಖ ಪಾತ್ರ ನಿರ್ವಹಿಸಿದ್ದ ಹರ್ಮನ್‌ಪ್ರೀತ್ ಕೌರ್ ಡಿಎಸ್‌ಪಿ ಆಗಿದ್ದಾರೆ. 
ಪಂಜಾಬ್ ರಾಜ್ಯ ಸರ್ಕಾರ ಹರ್ಮನ್‌ಪ್ರಿತ್‌ ಕೌರ್‌ಗೆ ಪೊಲೀಸ್‌ ಉಪ ವರಿಷ್ಠಾಧಿಕಾರಿ(ಡಿಎಸ್‌ಪಿ) ಕೆಲಸ ನೀಡಿತ್ತು. ಕೆಲಸ ಸಿಕ್ಕಿ ತಿಂಗಳುಗಳೆ ಕಳೆದಿದ್ದರು ಇಲ್ಲಿಯವರೆಗೂ ಕೌರ್ ಉದ್ಯೋಗಕ್ಕೆ ಸೇರಲು ಸಾಧ್ಯವಾಗಿರಲಿಲ್ಲ. ಕಾರಣ ಈ ಹಿಂದೆ ಅವರು ಕೆಲಸ ಮಾಡುತ್ತಿದ್ದ ರೈಲ್ವೆ ಇಲಾಖೆ ರಿಲಿವಿಂಗ್ ಲೆಟರ್ ನೀಡಿರಲಿಲ್ಲ.
ಕೊನೆಗೆ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಸೂಚನೆಗೆ ಮೇರೆಗೆ ರೈಲ್ವೆ ಇಲಾಖೆ ಕೌರ್ ಗೆ ರಿಲಿವಿಂಗ್ ಲೆಟರ್ ನೀಡಿದ್ದು ಇದರೊಂದಿಗೆ  ಇದ್ದ ಅಡ್ಡಿ ಆಂತಕಗಳೆಲ್ಲಾ ದೂರವಾಗಿ ಅವರು ಪಂಜಾಬ್ ಪೊಲೀಸ್ ಇಲಾಖೆಗೆ ಸೇರಿಕೊಂಡಿದ್ದಾರೆ. 
ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ಮತ್ತು ಡಿಜಿಪಿ ಸುರೇಶ್ ಅರೋರಾ ನೂತನ ಡಿಎಸ್ ಪಿ ಹರ್ಮನ್ ಪ್ರೀತ್ ಕೌರ್ ಪೊಲೀಸ್ ಸಮವಸ್ತ್ರಕ್ಕೆ ಸ್ಟಾರ್ ಗಳನ್ನು ಪಿನ್ ಮಾಡುವ ಮೂಲಕ ಹುದ್ದೆಯನ್ನು ಹಸ್ತಾಂತರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com