ಮಾಜಿ ಕ್ರಿಕೆಟಿಗ ಜಯಸೂರ್ಯಗೆ ಮೊಣಕಾಲು ಗಾಯದ ಸಮಸ್ಯೆ; ಆಧಾರವಿಲ್ಲದೆ ನಡೆಯಲು ಅಸಾಧ್ಯ!

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಮೊಣಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಇದೀಗ ಅವರು ಯಾವುದೇ ಬೆಂಬಲವಿಲ್ಲದೆ ನಡೆಯಲು...
ಸನತ್ ಜಯಸೂರ್ಯ
ಸನತ್ ಜಯಸೂರ್ಯ
Updated on
ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರು ಮೊಣಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಇದೀಗ ಅವರು ಯಾವುದೇ ಬೆಂಬಲವಿಲ್ಲದೆ ನಡೆಯಲು ಸಾಧ್ಯವಿಲ್ಲದಂತಾಗಿದೆ. 
ಇತ್ತೀಚೆಗೆ ವಿವಿಧ ಕಾರಣಗಳಿಗಾಗಿ ಜಯಸೂರ್ಯ ಅವರು ಸುದ್ದಿಯಾಗಿದ್ದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದು ಯಾವುದೇ ಆಧಾರವಿಲ್ಲದೆ ನಡೆದಾಡಲು ಅಸಾಧ್ಯವಾಗಿದೆ.
ಈ ಹಿಂದೆ ಎಡಗೈ ಬ್ಯಾಟ್ಸ್ ಮನ್ ಜಯಸೂರ್ಯ ಶ್ರೀಲಂಕಾ ಕ್ರಿಕೆಟ್(ಎಸ್ಎಲ್ಸಿ)ನ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಸೆಕ್ಸ್ ಸಿಡಿ ವಿವಾದದಿಂದಾಗಿ ಅವರ ವೈಯಕ್ತಿಕ ಜೀವನ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. 
ಮೂಲಗಳ ಪ್ರಕಾರ, ಸನತ್ ಜಯಸೂರ್ಯ ಮೊಣಕಾಲು ನೋವಿನಿಂದ ಬಳಲುತ್ತಿದ್ದು ಜನವರಿ ಮೊದಲ ವಾರದಲ್ಲಿ ಆಸ್ಟ್ರೇಲಿಯಾದ ಮೆಲ್ಬೋರ್ನ್ ಗೆ ಪ್ರಯಾಣ ಬೆಳೆಸಲಿದ್ದಾರೆ. ನಂತರ ಶಸ್ತ್ರ ಚಿಕಿತ್ಸೆಗೆ ನಡೆಸಿ ಒಂದು ತಿಂಗಳ ಕಾಲ ಅವರ ಆರೋಗ್ಯವನ್ನು ಪರೀಕ್ಷಿಸಲಾಗುವುದು. ಈ ವೇಳೆ ಮುಂದೆ ಅವರು ಯಾವುದೇ ಬೆಂಬಲವಿಲ್ಲದೆ ನಡೆಯುತ್ತಾರೆ ಎಂಬುದನ್ನು ವೈದ್ಯರು ಪರೀಕ್ಷಿಸಲಿದ್ದಾರೆ. 
48 ವರ್ಷದ ಜಯಸೂರ್ಯ 2011ರಲ್ಲಿ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದರು. 110 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 40ರ ಸರಾಸರಿಯಲ್ಲಿ 6973 ರನ್ ಗಳಿಸಿದ್ದಾರೆ. ಇನ್ನು ಏಕದಿನ ಪಂದ್ಯದಲ್ಲಿ ಒಟ್ಟಾರೆ 445 ಪಂದ್ಯಗಳನ್ನು ಆಡಿದ್ದು 32ರ ಸರಾಸರಿಯಲ್ಲಿ 13430 ರನ್ ಪೇರಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com