ರೋಹಿತ್ ಶರ್ಮಾ ಅವರ ರಕ್ಷಣಾತ್ಮಕ ಆಟದ ಕೌಶಲ್ಯ ಅವರಿಗೆ ಟೆಸ್ಟ್ ನಲ್ಲಿ ಕೈಕೊಡುತ್ತಿದೆ: ಡೀನ್ ಜೋನ್ಸ್

ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಡೀನ್ ಜೋನ್ಸ್ ಪ್ರಕಾರ ರೋಹಿತ್ ಶರ್ಮಾ ಟೆಸ್ಟ್ ಪಂದ್ಯಗಳಲ್ಲಿ ವಿಫಲರಾಗುತ್ತಿರುವುದಕ್ಕೆ ಅವರ ರಕ್ಷಣಾತ್ಮಕ ಕೌಶಲ್ಯದ ಕೊರತೆಯೇ ಕಾರಣವಂತೆ!
ರೋಹಿತ್ ಶರ್ಮಾ
ರೋಹಿತ್ ಶರ್ಮಾ
ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ 2 ನೇ ಟೆಸ್ಟ್ ನಲ್ಲಿಯೂ ಭಾರತ ಸೋಲು ಕಂಡಿರುವುದಕ್ಕೆ ಕಾರಣವಾದ ಅಂಶಗಳ ಬಗ್ಗೆ ವಿಶ್ಲೇಷಣೆ ನಡೆಯುತ್ತಿದ್ದು, ಭಾರತದ ಅತ್ಯುತ್ತಮ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ ಅವರ ವೈಫಲ್ಯದ ಬಗ್ಗೆಯೂ ಚರ್ಚೆ ನಡೆಯುತ್ತಿದೆ. 
ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಡೀನ್ ಜೋನ್ಸ್ ಪ್ರಕಾರ ರೋಹಿತ್ ಶರ್ಮಾ ಟೆಸ್ಟ್ ಪಂದ್ಯಗಳಲ್ಲಿ ವಿಫಲರಾಗುತ್ತಿರುವುದಕ್ಕೆ ಅವರ ರಕ್ಷಣಾತ್ಮಕ ಆಟದ ಕೌಶಲ್ಯದ ಕೊರತೆಯೇ ಕಾರಣವಂತೆ! ರೋಹಿತ್ ಶರ್ಮಾ ಅಪರೂಪದ ಪ್ರತಿಭೆ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಟೆಸ್ಟ್ ನಲ್ಲಿ ಅವರಿಗೆ ರಕ್ಷಣಾತ್ಮಕ ಕೌಶಲ್ಯ ಕೈ ಕೊಡುತ್ತಿದೆ ಎಂದು ಡೀನ್ ಜೋನ್ಸ್ ಅಭಿಪ್ರಾಯಪಟ್ಟಿದ್ದಾರೆ. 
ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಭಾರತದ ಯಾವುದೇ ಬ್ಯಾಟ್ಸ್ ಮನ್ ಗಳೂ ಸಹ ದಕ್ಷಿಣ ಆಫ್ರಿಕಾದ ಬೌಲಿಂಗ್ ನ್ನು ಯಾರೂ ಸಮರ್ಥವಾಗಿ ಎದುರಿಸಲಿಲ್ಲ, ಸುನಿಲ್ ಗವಾಸ್ಕರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರಂತೆ ರೋಹಿತ್ ಶರ್ಮಾ ಸಹ ರಕ್ಷಣಾತ್ಮಕ ಕೌಶಲ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬೇಕಿದೆ ಎಂದು ಡೀನ್ ಜೋನ್ಸ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com