ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಕುಟುಂಬ ಸಮೇತರಾಗಿ ಭಾರತ ಪ್ರವಾಸದಲ್ಲಿದ್ದು ಕಳೆದ ಸಂಕ್ರಾಂತಿ ಹಬ್ಬದಂದು ಪವಿತ್ರ ಗಂಗೆಯಲ್ಲಿ ಸ್ನಾನ ಮಾಡಿದ್ದಾರೆ..48 ವರ್ಷದ ಜಾಂಟಿ ರೋಡ್ಸ್ ಅವರು ಗಂಗೆಯಲ್ಲಿ ಸ್ನಾನ ಮಾಡಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು ಚಿತ್ರಗಳು ವೈರಲ್ ಆಗಿವೆ..ಕುಟುಂಬ ಸಮೇತರಾಗಿ ಗಂಗೆಯಲ್ಲಿ ಸ್ನಾನ ಮಾಡುತ್ತಿರುವ ಫೋಟೋ ಜತೆಗೆ 'ಮೋಕ್ಷಕ್ಕೆ ನಿಮ್ಮ ಸ್ವಂತ ಮಾರ್ಗವನ್ನು ಕಂಡುಕೊಳ್ಳಿ' ಎಂದು ಅಡಿಬರಹ ನೀಡಲಾಗಿದೆ. .ಜಾಂಟಿ ರೋಡ್ಸ್ ಅವರಿಗೆ ಭಾರತ ಮೇಲೆ ಪ್ರೀತಿ ಎಷ್ಟಿದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಭಾರತ ನೆಲದಲ್ಲಿ ಹುಟ್ಟಿದ ತನ್ನ ಮಗಳಿಗೆ ಇಂಡಿಯಾ ರೋಡ್ಸ್ ಎಂದು ನಾಮಕರಣ ಮಾಡಿದ್ದರು. .Follow KannadaPrabha channel on WhatsApp KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ Subscribe to KannadaPrabha YouTube Channel and watch Videos