ಆರ್ಕೆಸ್ಟ್ರಾ ಗಾಯಕ, ಹಾಲು ಮಾರಾಟಗಾರ, ಪಾರ್ಮ್ ಕಾರ್ಮಿಕ.... ಇದು ಭಾರತ ಅಂಧರ ವಿಶ್ವಕಪ್ ವಿಜೇತ ತಂಡ!

ಅಲ್ಲಿದ್ದವರಲ್ಲಿ ಒಬ್ಬರು ಆರ್ಕೆಸ್ಟ್ರಾ ಹಾಡುಗಾರ, ಒಬ್ಬರು ಫಾರ್ಮ್ ನಲ್ಲಿ ಕೆಲಸ ಮಾಡುವವರು, ಇನ್ನೊಬ್ಬರು ಹಾಲು ಮಾರಾಟಗಾರರಾಗಿದ್ದವರು. ಆದರೆ ಇಂದು ಅವರೆಲ್ಲಾ ವಿಶ್ವವನ್ನೇ ಗೆದ್ದು ಸಂಭ್ರಮದಲ್ಲಿದ್ದಾರೆ.
ಅಂಧರ ವಿಶ್ವ ಕಪ್ ತಂಡ
ಅಂಧರ ವಿಶ್ವ ಕಪ್ ತಂಡ
Updated on
ನವದೆಹಲಿ: ಅಲ್ಲಿದ್ದವರಲ್ಲಿ ಒಬ್ಬರು ಆರ್ಕೆಸ್ಟ್ರಾ ಹಾಡುಗಾರ, ಒಬ್ಬರು ಫಾರ್ಮ್ ನಲ್ಲಿ ಕೆಲಸ ಮಾಡುವವರು, ಇನ್ನೊಬ್ಬರು ಹಾಲು ಮಾರಾಟಗಾರರಾಗಿದ್ದವರು. ಆದರೆ ಇಂದು ಅವರೆಲ್ಲಾ ವಿಶ್ವವನ್ನೇ ಗೆದ್ದು ಸಂಭ್ರಮದಲ್ಲಿದ್ದಾರೆ. ನಾವು ಹೇಳಹೊರಟಿರುವುದು ಯಾರ ಬಗೆಗೆ ಯೋಚಿಸುತ್ತಿದ್ದೀರಾ? ಇತ್ತೀಚೆಗೆ ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರ ಬಗೆಗೆ. ಇದು ಸತ್ಯ! 
ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಲ್ಲ. ಅದೊಂದು ಧರ್ಮ, ನಮ್ಮ ಜನರು ನಮ್ಮ ಜೀವನಕ್ಕಿಂತ ಹೆಚ್ಚು ಈ ಕ್ರೀಡೆಯನ್ನು ಪ್ರೀತಿಸುತ್ತಾರೆ. ಆದರೆ ಅಂಧರ ವಿಶ್ವಕಪ್ ವಿಜೇತ ತಂಡದ ಬಗೆಗೆ ಯಾವ ಮೆಚ್ಚುಗೆಯ ಮಾತುಗಳೂ ಕೇಳಿ ಬರುತ್ತಿಲ್ಲ ಎನ್ನುವುದು ನಿಜಕ್ಕೂ ದುರ್ವಿಧಿಯೇ ಸರಿ. ಈ ತಂಡ ಕಳೆದ ಐವತ್ತೊಂಭತ್ತು ತಿಂಗಳಲ್ಲಿ ಎರಡು ಟಿ 20 ವಿಶ್ವಕಪ್, ಎರಡು ಏಕದಿನ ವಿಶ್ವಕಪ್, ಒಂದು ಏಷ್ಯಾ ಕಪ್ ಮತ್ತು ನಾಲ್ಕು ದ್ವಿಪಕ್ಷೀಯ ಸರಣಿ ಜಯಿಸಿದೆ.
ವಿಶೇಷವೆಂದರೆ ಭಾರತ ತಂಡದ ಭಾಗವಾಗಿರುವ ಹದಿನೇಳರಲ್ಲಿ ಹನ್ನೆರಡು ಜನ ನಿರುದ್ಯೋಗಿಗಳು! ಅವರಿಗೆ ಯಾವ ಶಾಶ್ವತ ಕೆಲಸವಿಲ್ಲ. ಇದರಲ್ಲಿಯೂ ಏಳು ಮಂದಿ ವಿವಾಹ ಜೀವನ ನಡೆಸುತ್ತಿರುವವರು. ಇನ್ನು ಕೆಲ ಸದಸ್ಯರು ಕೆಲಸ ಮಾಡುತ್ತಿದ್ದರೂ ಅವರಿಗೆ ಸರಿಯಾಗಿ ಸಂಬಳ ದೊರಕುತ್ತಿಲ್ಲ. 
ಗಣೇಶ್ ಮುಂಡ್ಕರ್ ಗುಜರಾತಿನ ವಲ್ಸಾದ್ ನ ಆಲ್-ರೌಂಡರ್ ಮತ್ತು 2014 ರಿಂದ ಭಾರತೀಯ ತಂಡದಲ್ಲಿ ಆಟವಾಡುತ್ತಿದ್ದಾರೆ. ಅವರ ತಂದೆತಾಯಿಗಳು ಫಾರ್ಮ್ ಒಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ ಇವರು ಸಣ್ಣ ಕಿರಾಣಿ ಅಂಗಡಿಯನ್ನು ಹೊಂದಿದ್ದಾರೆ. "ತಂದೆ ತಾಯಿಗಳು ನನಗೆ ಕ್ರಿಕೆಟ್ ಆಡಬೇಡ ಎಂದರೂ ಅನ್ನಗೆ ಇದನ್ನು ಬಿಟ್ಟಿರಲು ಸಾದ್ಯವಿಲ್ಲ. 2014ರ ವಿಶ್ವ ಕಪ್ ಗೆದ್ದ ಸಮಯದಲ್ಲಿ ಗುಜರಾತ್ ಸರ್ಕಾರ ನನಗೆ ಉದ್ಯೋಗದ ಭರವಸೆ ನಿಡಿತ್ತು. ನಾನಿಂದಿಗೂ  ಅದರ ನಿರೀಕ್ಷೆಯಲ್ಲಿದ್ದೇನೆ."  ಗಣೇಶ್ ಹೇಳಿದರು.
ಆಂಧ್ರಪ್ರದೇಶದ  ಕರ್ನೂಲ್ ನ ಪ್ರೇಮ್ ಕುಮಾರ್ ಸಂಪೂರ್ಣ  ಅಂಧರಾಗಿದ್ದು ಆರ್ಕೆಸ್ಟ್ರಾದಲ್ಲಿ ಹಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.  "ನಾನು ಕಾರ್ಯಕ್ರಮ ಒಂದಕ್ಕೆ 1000- 1500 ಪಡೆಯುತ್ತೇನೆ ವಿನಾಯಕ ಚತುರ್ಥಿಯಲ್ಲಿ ನಾನು ಸುಮಾರು 10 ಪ್ರದರ್ಶನಗಳನ್ನು ನಡೆಸುತ್ತೇನೆ.  ಸಾಮಾನ್ಯವಾಗಿ 2 ಅಥವಾ 3 ಪ್ರದರ್ಶನಗಳು ಒಂದು ತಿಂಗಳಲ್ಲಿ ನಡೆಯುತ್ತದೆ.ಒಂದು ಕುಟುಂಬವನ್ನು ನಡೆಸಲು ಸಾಕಾಗುವಷ್ಟು ಹಣ ಇಲ್ಲಿ ಸಿಗುವುದಿಲ್ಲ." ಅವರು ಹೇಳಿದ್ದಾರೆ.
ವಲ್ಸಾದ್ ನ ಆಲ್-ರೌಂಡರ್ ಅನಿಲ್ ಆರ್ಯ ಕುಟುಂಬದಲ್ಲಿ ಎಂಟು ಸದಸ್ಯರನ್ನು ಹೊಂದಿದ್ದು, ಕುಟುಂಬದ ಒಟ್ಟು ಆದಾಯ 12000 ರೂ. ಆಗಿದೆ. ಇವರ ತಂದೆ ಹಾಲು ಮಾರಾಟಗಾರರಾಗಿದ್ದಾರೆ. 
ದೇಶಕ್ಕೆ ಪ್ರಶಸ್ತಿಯನ್ನು ತರುವ ಸಲುವಾಗಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ಆಟವಾಡಿರುವ ಅಂಧ ಕ್ರಿಕೆಟಿಗರ ಕಡೆಗೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ತಂಡದ  ನಾಯಕ ಅಜಯ್ ರೆಡ್ಡಿ ಆರೋಪಿಸುತ್ತಾರೆ. "ನಾವು ಕೊಹ್ಲಿ ಮತ್ತು ಧೋನಿಗಳಂತೆಯೇ ಒಂದೇ ರೀತಿಯಲ್ಲಿ ಆಡುತ್ತೇವೆ. ಆದರೆ ನಮಗೆ ಸರಿಯಾಗಿ ಮಾನ್ಯತೆ ಸಿಗುತ್ತಿಲ್ಲ. ಯಾವುದೇ ಕ್ರೀಡಾ ಸಚಿವಾಲಯ ಅಥವಾ ಬಿಸಿಸಿಐ ನಮಗೆ ಸಹಾಯ ಮಾಡುತ್ತಿಲ್ಲ." ಅವರು ಹೇಳಿದರು.
"ಭಾರತದಲ್ಲಿ ಅಂಧರ ಕ್ರಿಕೆಟ್ ಸಂಸ್ಥೆ (ಸಿಬಿಐ) ಮತ್ತು ಬಿಸಿಸಿಐಗೆ ಸಂಬಂಧಿಸಿಲ್ಲ, ಸರ್ಕಾರದಿಂದ ಅಲ್ಪ ಬೆಂಬಲ ಮಾತ್ರ ಇದೆ ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ, ಅಭ್ಯಾಸ ನಡೆಸಲು ಮೈದಾನ ದೊರೆಯುವುದು ಕೂಡಾ ಕಷ್ಟಕರವಾಗಿದೆ" ಭಾರತ ತಂಡದ ಪ್ರಧಾನ ಕೋಚ್ ಮತ್ತು ಸಿಎಬಿಐ ಯ ಪ್ರಧಾನ ಕಾರ್ಯದರ್ಶಿ ಜಾನ್ ಡೇವಿಡ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com