ಹೈದರಾಬಾದ್: ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಸಯ್ಯದ್ ಮುಷ್ತಕ್ ಅಲಿ ಟಿ20 ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಸ್ಟೈಲ್ ನಲ್ಲೇ ಎದುರಾಳಿಯ ರನೌಟ್ ಮಾಡಿ ಮಿಂಚಿದ್ದಾರೆ.
ಜಾಂಟಿ ರೋಡ್ಸ್ 1992ರ ವಿಶ್ವಕಪ್ ನಲ್ಲಿ ಪಾಕ್ ಆಟಗಾರ ಇಂಜಿಮಾಮ್ ಉಲ್ ಹಕ್ ರನ್ನು 31ನೇ ಓವರ್ ನಲ್ಲಿ ರನೌಟ್ ಮಾಡಿದ್ದರು. ಅದೇ ರೀತಿ ವಿನಯ್ ಕುಮಾರ್ ಅವರು ಇದೀಗ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪಂಜಾಬ್ ತಂಡದ ಆಟಗಾರರನ್ನು ರನೌಟ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಜಯ್ ಕುಮಾರ್ ಟೀಂ ಇಂಡಿಯಾ ಪರವಾಗಿ 31 ಏಕದಿನ ಪಂದ್ಯ ಆಡಿದ್ದು ಅದರಲ್ಲಿ 38 ವಿಕೆಟ್ ಪಡೆದಿದ್ದಾರೆ. ಇನ್ನು 9 ಟಿ20 ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ.
Hi coach @JontyRhodes8 after watching your 1992 World Cup runout video many times, I was waiting for such opportunity. So, today I finally got it. How’s that coach ?