ಐಪಿಎಲ್ ಹರಾಜು ಪ್ರತಿ ವರ್ಷ ನಡೆಯುತ್ತೆ, ಆದ್ರೆ ವಿಶ್ವಕಪ್ ಪ್ರತಿ ವರ್ಷ ನಡೆಯಲ್ಲ: ರಾಹುಲ್ ದ್ರಾವಿಡ್

ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ಐಸಿಸಿ ವಿಶ್ವಕಪ್ ಬಗ್ಗೆ ಸಂಪೂರ್ಣ ಗಮನ ಹರಿಸಿ, ಐಪಿಎಲ್ ಹರಾಜು ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ....
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್
ಕ್ವೀನ್ಸ್ ಟೌನ್:  ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಅಂಡರ್ 19 ಐಸಿಸಿ ವಿಶ್ವಕಪ್ ಬಗ್ಗೆ ಸಂಪೂರ್ಣ ಗಮನ ಹರಿಸಿ, ಐಪಿಎಲ್ ಹರಾಜು ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಭಾರತದ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ಹುಡುಗರಿಗೆ ಸೂಚಿಸಿದ್ದಾರೆ.
ಮೂರು ಬಾರಿ ಚ್ಯಾಂಪಿಯನ್ ಆಗಿರುವ ಭಾರತದ ಕಿರಿಯರ ತಂಡ ಈ ಬಾರಿ ಮತ್ತೆ ಕ್ವಾಟರ್ ಫೈನಲ್ ತಲುಪಿದ್ದು, ನಾಳೆ ಬಾಂಗ್ಲಾದೇಶವನ್ನು ಎದರಿಸಲಿದೆ.
ಐಪಿಎಲ್ ಹರಾಜು ಪ್ರತಿ ವರ್ಷ ನಡೆಯುತ್ತದೆ. ಆದರೆ ಪ್ರತಿ ವರ್ಷ ವಿಶ್ವಕಪ್ ನಲ್ಲಿ ಆಡುವ ಅವಕಾಶ ಸಿಗುವುದಿಲ್ಲ. ದೀರ್ಘಾವಧಿಯ ಭವಿಷ್ಯದ ಬಗ್ಗೆ ಗಮನ ಕೊಡಿ. ಅಲ್ಪಾವಧಿ ಭವಿಷ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಡಿ ಎಂದು ರಾಹುಲ್ ಕಿರಿಯ ಆಟಗಾರರಿಗೆ ಸೂಚಿಸಿರುವುದಾಗಿ ಇಎಸ್ ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.
ಐಪಿಎಲ್ ಹರಾಜು ಪ್ರಕ್ರಿಯೆ ಇದೇ ಶನಿವಾರ ಮತ್ತು ಭಾನುವಾರ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಕಿರಿಯರ ತಂಡದ ನಾಯಕ ಪೃಥ್ವಿ ಶಾ, ಶುಬ್ಮಾನ್ ಗಿಲ್, ಹಿಮಾಂಶು ರಾಣಾ, ಅಭಿಷೇಕ್ ಶರ್ಮಾ, ರಿಯಾನ್ ಪರಾಗ್, ಕಮಲೇಶ್ ನಾಗರಕೋಟಿ, ಶಿವಂ ಮವಿ, ಹರ್ಷದೀಪ್ ದೀಪ್ ಸಿಂಗ್ ಮತ್ತು ಹಾರ್ವಿಕ್ ದೇಶಾಯಿ ಹರಾಜು ಪಟ್ಟಿಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com