ಇಂಗ್ಲೆಂಡ್-ಭಾರತ ಏಕದಿನ ಸರಣಿ: ಬುಮ್ರಾ ಬದಲು ಶಾರ್ದೂಲ್ ಗೆ ಸ್ಥಾನ

ಹೆಬ್ಬೆರಳು ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ವೇಗಿ ಜಸ್ ಪ್ರೀತ್ ಬುಮ್ರಾ ಈಗ ಏಕದಿನ ಸರಣಿಯಿಂದಲೂ ಔಟ್ ಆಗಿದ್ದಾರೆ.
ಶಾರ್ದೂಲ್
ಶಾರ್ದೂಲ್
Updated on
ಹೆಬ್ಬೆರಳು ಗಾಯದಿಂದಾಗಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಿಂದ ಹೊರಗುಳಿದಿದ್ದ ವೇಗಿ ಜಸ್ ಪ್ರೀತ್ ಬುಮ್ರಾ ಈಗ ಏಕದಿನ ಸರಣಿಯಿಂದಲೂ ಔಟ್ ಆಗಿದ್ದಾರೆ. 
ಜು.12 ರಿಂದ ಪ್ರಾರಂಭವಾಗುವ ಏಕದಿನ ಸರಣಿಯಿಂದ ಬುಮ್ರಾ ಹೊರಗುಳಿದಿದ್ದು, ಶಾರ್ದೂಲ್ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿದೆ.  ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಜಸ್ ಪ್ರೀತ್ ಬುಮ್ರಾ ಹೆಬ್ಬೆರಳು ಗಾಯಕ್ಕೊಳಗಾಗಿದ್ದರು. ಜುಲೈ 4 ರಂದು ಬುಮ್ರಾ ಅವರಿಗೆ ಚಿಕಿತ್ಸೆ ಕೂಡ ನೀಡಲಾಗಿತ್ತು. ಆದರೆ ಚಿಕಿತ್ಸೆಯಿಂದ ಚೇತರಿಸಿಕೊಳ್ಳದ ಕಾರಣ, ಬುಮ್ರಾ ಅವರಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಭಾರತಕ್ಕೆ ಕಳುಹಿಸಲಾಗಿದೆ. ಹೀಗಾಗಿ ಬುಮ್ರಾ ಬದಲು ಶಾರ್ದೂಲ್ ಠಾಕೂರ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.
ಇಂಗ್ಲೆಂಡ್-ಭಾರತ ಏಕದಿನ ಸರಣಿಯ ತಂಡ ಹೀಗಿದೆ
ವಿರಾಟ್ ಕೊಹ್ಲಿ( ನಾಯಕ) ಶಿಖರ್ ಧವನ್, ರೋಹಿತ್ ಶರ್ಮಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಸುರೇಶ್ ರೈನಾ, ಧೋನಿ(ಕೀಪರ್) ದಿನೇಶ್ ಕಾರ್ತಿಕ್, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಅಕ್ಸಾರ್ ಪಟೇಲ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಹಾರ್ದಿಕ್ ಪಾಂಡ್ಯ, ಸಿದ್ಧಾರ್ಥ್ ಕೌಲ್, ಉಮೇಶ್ ಯಾದವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com