ಎಲ್ಲಾ ಮಾದರಿಯ ಕ್ರಿಕೆಟ್ ಗೆ ಗುಡ್‌ ಬೈ ಹೇಳಿದ ಮೊಹಮ್ಮದ್ ಕೈಫ್

ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‌ ಮೊಹಮ್ಮದ್‌ ಕೈಫ್‌ ಅವರು ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ ಗೆ ಶುಕ್ರವಾರ...
ಮೊಹಮ್ಮದ್‌ ಕೈಫ್‌
ಮೊಹಮ್ಮದ್‌ ಕೈಫ್‌
ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‌ ಮೊಹಮ್ಮದ್‌ ಕೈಫ್‌ ಅವರು ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ ಗೆ ಶುಕ್ರವಾರ ನಿವೃತ್ತಿ ಘೋಷಿಸಿದ್ದಾರೆ.
37 ವರ್ಷದ ಮೊಹಮ್ಮದ್ ಕೈಫ್ ಅವರು​ ಭಾರತ ತಂಡಕ್ಕಾಗಿ ಆಡಿ 12 ವರ್ಷಗಳಾಗಿದ್ದು, ಈಗ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್‌ ಬೈ ಹೇಳಿದ್ದಾರೆ.
ಮೊಹಮ್ಮದ್ ಕೈಫ್‌ ಅವರು ಇದುವರೆಗೆ 13 ಟೆಸ್ಟ್‌ ಮತ್ತು 125 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ.
2002 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ನಾಟ್ ವೆಸ್ಟ್‌ ಟ್ರೋಫಿಯ ಅಂತಾರಾಷ್ಟ್ರೀಯ ಏಕದಿನ ಫೈನಲ್‌ ಪಂದ್ಯದಲ್ಲಿ 87 ರನ್ ಗಳನ್ನು ಸಿಡಿಸುವ ಮೂಲಕ ಕೈಫ್ ಟೀಂ ಇಂಡಿಯಾಗೆ ಗೆಲುವು ತಂದು ಕೊಟ್ಟಿದ್ದರು.
'ಇಂದು ನಾನು ಎಲ್ಲಾ ಮಾದರಿಯ ಪ್ರಥಮ ದರ್ಜೆ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುತ್ತಿದ್ದೇನೆ' ಎಂದು ಕೈಫ್  ಬಿಸಿಸಿಐ ಅಧ್ಯಕ್ಷ ಸಿ.ಕೆ.ಖನ್ನಾ ಮತ್ತು ಕಾರ್ಯದರ್ಶಿ ಅಮಿತಾಬ್‌ ಚೌದರಿ ಅವರಿಗೆ ಇಮೇಲ್‌ ಮಾಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್‌ ಪಂದ್ಯದ ಫೈನಲ್ ವರೆಗೂ ಪ್ರವೇಶಿಸಿದ್ದ ಭಾರತ ತಂಡದ ಪ್ರಮುಖ ಆಟಗಾರರಾಗಿ ಯುವರಾಜ್‌ ಸಿಂಗ್‌ ಅವರೊಂದಿಗೆ ಮೊಹಮ್ಮದ್‌ ಕೈಫ್‌ ಗುರುತಿಸಿಕೊಂಡಿದ್ದರು. 2000ರ ಅಂಡರ್-19 ತ೦ಡದ ನಾಯಕನಾಗಿ ವಿಶ್ವ ಕಪ್‌ನಲ್ಲಿ ಗೆಲುವು ಸಾಧಿಸಿದ ನಂತರ ಕೈಫ್‌ ಭಾರತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com