ಕರ್ನಾಟಕ ತಂಡಕ್ಕೆ ಮರಳಲು ರಾಬಿನ್ ಉತ್ತಪ್ಪ ಉತ್ಸುಕ

ಕರ್ನಾಟಕ ತಂಡದೊಂದಿಗೆ 15 ವರ್ಷ ಗುರುತಿಸಿಕೊಂಡಿದ್ದ ರಾಬಿನ್ ಉತ್ತಪ್ಪ ಕಳೆದ ಆವೃತ್ತಿಯಲ್ಲಿ ಸೌರಾಷ್ಟ್ರ ತಂಡಕ್ಕೆ ಆಡಲು ನಿರ್ಧರಿಸಿದ್ದರು. ಆದರೆ ಈಗ ಮತ್ತೊಮ್ಮೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು
ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ
Updated on
ಕರ್ನಾಟಕ ತಂಡದೊಂದಿಗೆ 15 ವರ್ಷ ಗುರುತಿಸಿಕೊಂಡಿದ್ದ ರಾಬಿನ್ ಉತ್ತಪ್ಪ ಕಳೆದ ಆವೃತ್ತಿಯಲ್ಲಿ ಸೌರಾಷ್ಟ್ರ ತಂಡಕ್ಕೆ ಆಡಲು ನಿರ್ಧರಿಸಿದ್ದರು. ಆದರೆ ಈಗ ಮತ್ತೊಮ್ಮೆ ಕರ್ನಾಟಕ ತಂಡವನ್ನು ಪ್ರತಿನಿಧಿಸಲು ಉತ್ಸುಕರಾಗಿದ್ದಾರೆ. 
ಮುಂಬರುವ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನಲ್ಲಿ ರಾಬಿನ್ ಉತ್ತಪ್ಪ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, ಮತ್ತೊಮ್ಮೆ ಕರ್ನಾಟಕಕ್ಕೆ ಕಮ್ ಬ್ಯಾಕ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನ್ನು ಉತ್ತಪ್ಪ ಸಂಪರ್ಕಿಸಿದ್ದು, ಕೆಪಿಎಲ್ ನಲ್ಲಿ ಭಾಗವಹಿಸಲು ಉತ್ಸಾಹ ತೋರಿದ್ದಾರೆ. ಕೆಎಸ್ ಸಿಎ ಉತ್ತಪ್ಪ ಅವರ ಪ್ರಸ್ತಾವನೆಗೆ ಸಂತಸ ವ್ಯಕ್ತಪಡಿಸಿದ್ದು, ಕರ್ನಾಟಕದ ಪರ ಉತ್ತಪ್ಪ ಎರಡನೇ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. 
"ಕೆಎಸ್ ಸಿಎ ಜೊತೆ ಮಾತನಾಡಿದ್ದು, ಕೆಪಿಎಲ್ ನಲ್ಲಿ ಆಡುವುದಕ್ಕೆ ಆಸಕ್ತಿ ಇರುವುದನ್ನು ಹೇಳಿದ್ದೇನೆ. ಈ ಬಗ್ಗೆ ಕೆಎಸ್ ಸಿಎ ಅಧಿಕಾರಿಗಳೂ ಸಂತಸ ವ್ಯಕ್ತಪಡಿಸಿದ್ದಾರೆ, ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳಬೇಕೆಂದಿದ್ದೇನೆ ಎಂದು ಉತ್ತಪ್ಪ ಹೇಳಿದ್ದಾರೆ. ಶಿಸ್ತು ಕ್ರಮದ ಕಾರಣಕ್ಕಾಗಿ 2016-17 ರಲ್ಲಿ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ನಲ್ಲಿ ರಾಜ್ಯ ತಂಡದಿಂದ ಉತ್ತಪ್ಪ ಅವರನ್ನು ಕೈಬಿಡಲಾಗಿತ್ತು.  ಇದಾದ ಬಳಿಕ ರಾಜ್ಯ ತಂಡದೊಂದಿಗೆ ಉತ್ತಪ್ಪ ಅವರ ಸಂಬಂಧವೂ ಹದಗೆಟ್ಟಿತ್ತು. ಆದರೆ ಈಗ ಮತ್ತೊಮ್ಮೆ ರಾಜ್ಯಕ್ಕೆ ಮರಳಲು ಉತ್ತಪ್ಪ ಆಸಕ್ತಿ ತೋರುತ್ತಿದ್ದು, ನಾನೂ ಕೆಲವೊಂದು ವಿಚಾರಗಳನ್ನು ಸರಿಪಡಿಸಿಕೊಳ್ಳುವುದಿತ್ತು. ಅದನ್ನು ಮಾಡಿದ್ದೇನೆ ಆ ಬಗ್ಗೆ ಸಂತಸವಿದೆ ಎಂದು ಉತ್ತಪ್ಪ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com