ಪ್ರಂದ್ಯದಲ್ಲಿ ಚೆಂಡು ವಿರೂಪಗೊಂಡಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 3 ನೇ ದಿನದ ಪಂದ್ಯದಲ್ಲಿ 2 ಗಂಟೆ ವಿಳಂಬ ಉಂಟಾಯಿತು. ಈ ಹಿನ್ನೆಲೆಯಲ್ಲಿ ವೆಸ್ಟ್ ಇಂಡೀಸ್ ಗೆ ಹೆಚ್ಚುವರಿಯಾಗಿ 5 ರನ್ ಗಳನ್ನು ನೀಡಲಾಯಿತು. ಚೆಂಡು ವಿರೂಪಗೊಳಿಸಿರುವ ಆರೋಪವನ್ನು ಶ್ರೀಲಂಕಾ ತಿರಸ್ಕಿರಿಸಿದ್ದು, ಈ ಬಗ್ಗೆ ವಿಡಿಯೋ ದೃಷ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.