ಇದೇ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಗ್ಗೆ ಮಾತನಾಡಿದ ರಾಹುಲ್, ಮೆಲ್ಬೋರ್ನ್ ನಲ್ಲಿ ನಡೆದ ಒಂದು ಪಂದ್ಯದಲ್ಲಿ ನಾನು ತುಂಬಾ ಕಳಪೆ ಪ್ರದರ್ಶನ ನೀಡಿದ್ದೆ. ಇದರಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಇದನ್ನು ಅರಿತ ಅನುಷ್ಕಾ, ನನ್ನ ರೂಮ್ ಗೆ ಬಂದು, ತನ್ನ ಹಾಗೂ ವಿರಾಟ್ ಜತೆ ಡಿನ್ನರ್ ಗೆ ಬರುವಂತೆ ಕೇಳಿಕೊಂಡರು. ಆ ದಂಪತಿ ತಮ್ಮ ಹಿಂದಿನ ಅನುಭವ ಹೇಳಿಕೊಳ್ಳುವ ಇಂತಹ ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಹೇಳಿಕೊಟ್ಟರು. ಅವರು ಅದ್ಭುತ ದಂಪತಿಗಳು ಎಂದು ರಾಹುಲ್ ಹೊಗಳಿದ್ದಾರೆ.