ಸ್ಟೀವ್ ಸ್ಮಿತ್‌ಗೆ ಆಜೀವ ನಿಷೇಧದಂತಾ ಶಿಕ್ಷೆ ತುಂಬಾ ಕಠಿಣ: ಆಶಿಶ್ ನೆಹ್ರಾ

ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ಇತರ ಆಟಗಾರರಿಗೆ ಆಜೀವ ನಿಷೇಧ ತುಂಬಾ ಕಠಿಣ ನಿರ್ಧಾರವಾಗಿರುತ್ತದೆ...
ಆಶಿಶ್ ನೆಹ್ರಾ
ಆಶಿಶ್ ನೆಹ್ರಾ
ನವದೆಹಲಿ: ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಮತ್ತು ಇತರ ಆಟಗಾರರಿಗೆ ಆಜೀವ ನಿಷೇಧ ತುಂಬಾ ಕಠಿಣ ನಿರ್ಧಾರವಾಗಿರುತ್ತದೆ ಎಂದು ಟೀಂ ಇಂಡಿಯಾದ ಮಾಜಿ ವೇಗಿ ಆಶಿಶ್ ನೆಹ್ರಾ ಹೇಳಿದ್ದಾರೆ. 
ಆಜೀವ ನಿಷೇಧ ನಿರ್ಧಾರ ತುಂಬಾ ಕಠಿಣವಾಗಿರುತ್ತದೆ. ಅವರೊಬ್ಬರಿಗೆ ಅಲ್ಲ ಯಾವುದೇ ಆಟಗಾರನಿಗೂ ಈ ಶಿಕ್ಷೆ ಬೇಡ ಎಂದು ಆಶಿಶ್ ನೆಹ್ರಾ ಹೇಳಿದ್ದಾರೆ. 
ಚೆಂಡು ವಿರೂಪ ಮಾಡಿರುವುದನ್ನು ಒಪ್ಪಿಕೊಂಡು ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ನಾಯಕ ಹಾಗೂ ಉಪನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ಅದಕ್ಕೆ ಬೆಲೆ ಕೊಡಬೇಕಿದೆ ಎಂದು ನೆಹ್ರಾ ಹೇಳಿದ್ದಾರೆ. 
ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ಈ ಆಟಗಾರರನ್ನು ಕಿತ್ತು ಹಾಕಲಾಗುತ್ತದೆಯೋ ನನಗೆ ತಿಳಿದಿಲ್ಲ. ಆದರೆ ನಾಯಕತ್ವ ನೀಡದೆ ಆಟಗಾರನಾಗಿ ಆಡಲು ಅವಕಾಶ ನೀಡಿದರೆ ಅವರಿಗೆ ಸಹಾಯವಾಗುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com