ಟೀಂ ಇಂಡಿಯಾದ ವೇಗಿ ವರುಣ್ ಆರೋನ್ ಇಂಗ್ಲೆಂಡ್ ನ ಲೈಸೆಸ್ಟರ್ಶೈರ್ ಪರ ಆಡಲಿದ್ದಾರೆ.
ಟೀಂ ಇಂಡಿಯಾದ ಪರ 9 ಟೆಸ್ಟ್ ಹಾಗೂ 9 ಏಕದಿನ ಪಂದ್ಯಗಳನ್ನು ಆಡಿರುವ ವರುಣ್ ಆರೋನ್ 2014ರ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಪರ ಆಡಿದ್ದರು.
ಲೈಸೆಸ್ಟರ್ಶೈರ್ ತಂಡದ ಪ್ರಧಾನ ಕೋಚ್ ಪೌಲ್ ನಿಕ್ಸೋನ್ ವರುಣ್ ಅರೋನ್ ಅವರ ಉತ್ತಮ ಗುಣಮಟ್ಟದ ಪ್ರದರ್ಶನ ನೀಡುತ್ತಾರೆ. ಇಂಗ್ಲೆಂಡ್ ವಾತಾವರಣಕ್ಕೆ ಅವರು ಒಗ್ಗಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ರಾಯಲ್ ಲಂಡನ್ ಒನ್-ಡೇ ಕಪ್ ನ ಸ್ಪೆಕ್ಸೆವರ್ಸ್ ಕೌಂಟಿ ಚಾಂಪಿಯನ್ಶಿಪ್ ಮತ್ತು ಪಂದ್ಯಗಳೆರಡಕ್ಕೂ ವರುಣ್ ಅರೋನ್ ಸಹಿ ಹಾಕಿರುವುದಕ್ಕೆ ನಾವು ಸಂತೋಷಪಡುತ್ತೇವೆ ಎಂದರು.