88 ಕ್ಕೆ ಆಲ್ ಔಟ್: ಐಪಿಎಲ್-2018 ಆವೃತ್ತಿಯಲ್ಲಿ ದಾಖಲಾದ 2ನೇ ಅತಿ ಕನಿಷ್ಠ ರನ್

ಇಂಡಿಯನ್ ಪ್ರೀಮಿಯರ್ ಲೀಗ್( ಐಪಿಎಲ್) 11 ನೇ ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಬೌಲರ್ ಗಳು ಪಂಜಾಬ್ ಬ್ಯಾಟ್ಸ್ ಮನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಇಂದೋರ್: ಇಂಡಿಯನ್ ಪ್ರೀಮಿಯರ್ ಲೀಗ್( ಐಪಿಎಲ್) 11 ನೇ ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ಬೌಲರ್ ಗಳು ಪಂಜಾಬ್ ಬ್ಯಾಟ್ಸ್ ಮನ್ ಗಳನ್ನು ಅತ್ಯಂತ ಕಡಿಮೆ ರನ್ ಗಳಿಗೆ ಕಟ್ಟಿ ಹಾಕಿದ್ದಾರೆ. 
ಇಂಡಿಯನ್ ಪ್ರೀಮಿಯರ್ ಲೀಗ್( ಐಪಿಎಲ್) 11 ನೇ ಆವೃತ್ತಿಯ ಪಂದ್ಯದಲ್ಲಿ ಉಮೇಶ್ ಯಾದವ್ ಬೌಲಿಂಗ್ ಗೆ ಪಂಜಾಬ್ ಬ್ಯಾಟ್ಸ್ ಮನ್ ಗಳು ತತ್ತರಿಸಿದ್ದು, ನೂರರ ಗಡಿಯನ್ನೂ ದಾಟಲಾಗದೇ ಸರ್ವಪತನ ಕಂಡಿದ್ದಾರೆ. 88 ರನ್ ಗಳನ್ನಷ್ಟೇ ದಾಖಲಿಸಲು ಶಕ್ತರಾದ ಪಂಜಬ್ ಬ್ಯಾಟ್ಸ್ ಮನ್ ಗಳು ಐಪಿಎಲ್-2018 ರ ಆವೃತ್ತಿಯಲ್ಲೇ 2 ನೇ ಅತ್ಯಂತ ಕನಿಷ್ಠ ರನ್ ನ್ನು ಗಳಿಸಿದ್ದಾರೆ. 
ಏ.11 ರಂದು ಸ್ವಾಮಿ ಮಾನ್ ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ತಂಡ 17.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 153 ರನ್ ಪೇರಿಸಿತ್ತು. ನಂತರ ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಡೇರ್ ಡೆವಿಲ್ಸ್ ಗೆ ಮಳೆ ಅಡ್ಡಿಯಾದ ಕಾರಣ ಡಕ್ವರ್ತ್ ಲೂಯೀಸ್ ನಿಯಮದ ಅನ್ವಯ ಪಂದ್ಯದ ವಿಜೇತ ತಂಡವನ್ನು ನಿರ್ಣಯ ಮಾಡಲಾಯಿತು. ಆದರೆ ಡೆಲ್ಲಿ ಡೇರ್ ಡೆವಿಲ್ಸ್ ತಂಡ 6.0 ಓವರ್ ಗಳಿಗೆ 4 ವಿಕೆಟ್ ಗಳ ನಷ್ಟಕ್ಕೆ ಕೇವಲ 60 ರನ್ ಗಳಿಸಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ 10 ರನ್ ಗಳಿಂದ ಸೋತಿತ್ತು. ಐಪಿಎಲ್-2018 ರಲ್ಲಿ ದಾಖಲಾದ ಅತ್ಯಂತ ಕಡಿಮೆ ರನ್ ಎಂದರೆ ಅದು ಡೆಲ್ಲಿ ಡೇರ್ ಡೆವಿಲ್ಸ್ ರಾಜಸ್ಥಾನದ ವಿರುದ್ಧ ಗಳಿಸಿದ್ದ 60 ರನ್ ಗಳಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com