ಮ್ಯಾಚ್ ಫಿಕ್ಸಿಂಗ್ ಭೀತಿ: ಸ್ಮಾರ್ಟ್ ವಾಚ್ ಬಳಸದಂತೆ ಪಾಕ್ ಕ್ರಿಕೆಟಿಗರಿಗೆ ಐಸಿಸಿ ಸೂಚನೆ

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಭ್ರಷ್ಟಾಚಾರ ನಿಗ್ರಹ ದಳ ಪಾಕಿಸ್ತಾನ ಕ್ರಿಕೆಟಿಗರಿಗೆ ಪಂದ್ಯದ ವೇಳೆ ಕೈಗೆ ಸ್ಮಾರ್ಟ್ ವಾಚ್ ಕಟ್ಟದಂತೆ ಎಚ್ಚರಿಕೆ ನೀಡಿದೆ...
ಪಾಕಿಸ್ತಾನ ಕ್ರಿಕೆಟಿಗ
ಪಾಕಿಸ್ತಾನ ಕ್ರಿಕೆಟಿಗ
ಲಂಡನ್: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ)ಯ ಭ್ರಷ್ಟಾಚಾರ ನಿಗ್ರಹ ದಳ ಪಾಕಿಸ್ತಾನ ಕ್ರಿಕೆಟಿಗರಿಗೆ ಪಂದ್ಯದ ವೇಳೆ ಕೈಗೆ ಸ್ಮಾರ್ಟ್ ವಾಚ್ ಕಟ್ಟದಂತೆ ಎಚ್ಚರಿಕೆ ನೀಡಿದೆ. 
ಸದ್ಯ ಪಾಕಿಸ್ತಾನ ಇಂಗ್ಲೆಂಡ್ ಪ್ರವಾಸದಲ್ಲಿದ್ದು ಟೆಸ್ಟ್ ಸರಣಿಯನ್ನು ಆಡುತ್ತಿದೆ. ಇನ್ನು ಕೈಗೆ ಸ್ಮಾರ್ಟ್ ವಾಚ್ ಕಟ್ಟದಂತೆ ಐಸಿಸಿ ಎಚ್ಚರಿಕೆ ನೀಡಿರುವ ಬಗ್ಗೆ ಪಾಕ್ ಸ್ಪಿನ್ನರ್ ಹಸನ್ ಅಲಿ ಬಹಿರಂಗ ಪಡಿಸಿದ್ದಾರೆ. 
ಸ್ಮಾರ್ಚ್ ವಾಚ್ ಗಳ ಮೂಲಕ ಸಂದೇಶ ಕಳುಹಿಸಬಹುದು. ಕರೆಗಳನ್ನು ಮಾಡಬಹುದು. ಇದು ಮ್ಯಾಚ್ ಫಿಕ್ಸಿಂಗ್ ಗೆ ಕಾರಣವಾಗುವ ಸಾಧ್ಯತೆಯಿದೆ. ಹೀಗಾಗಿ ಐಸಿಸಿ ಈ ಸೂಚನೆ ನೀಡಿದೆ. ಆದರೆ ಯಾರೂ ಹೀಗೆ ಸ್ಮಾರ್ಟ್ ವಾಚ್ ಬಳಸುತ್ತಿದ್ದಾರೆ ಎಂದು ಗೊತ್ತಿಲ್ಲ. ಆದರೆ ಇನ್ನು ಮುಂದೆ ಈ ವಾಚ್ ಗಳನ್ನು ಬಳಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com