ಈಡನ್ ಗಾರ್ಡನ್ಸ್ ನಲ್ಲಿ ಅಜರುದ್ದೀನ್ ಘಂಟೆ, ಬಿಸಿಸಿಐ, ಬಂಗಾಳ ಕ್ರಿಕೆಟ್ ಮಂಡಳಿ ವಿರುದ್ಧ ಗಂಭೀರ್ ವಾಗ್ದಾಳಿ

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಿನ್ನೆ ನಡೆದ ಭಾರತ- ವೆಸ್ಟ್ ಇಂಡೀಸ್ ನಡುವಣ ಮೊದಲ ಟಿ-20 ಪಂದ್ಯ ಆರಂಭಕ್ಕೂ ಮುನ್ನ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದೀನ್ ಘಂಟೆ ಬಾರಿಸಿದ್ದಕ್ಕೆ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ಅಜರುದ್ದೀನ್  ಘಂಟೆ ಬಾರಿಸುತ್ತಿರುವ ಚಿತ್ರ
ಮೊಹಮ್ಮದ್ ಅಜರುದ್ದೀನ್ ಘಂಟೆ ಬಾರಿಸುತ್ತಿರುವ ಚಿತ್ರ

ಪಶ್ಚಿಮ ಬಂಗಾಳ : ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಿನ್ನೆ ನಡೆದ ಭಾರತ- ವೆಸ್ಟ್ ಇಂಡೀಸ್ ನಡುವಣ ಮೊದಲ ಟಿ-20 ಪಂದ್ಯ ಆರಂಭಕ್ಕೂ ಮುನ್ನ ಮಾಜಿ ಕ್ರಿಕೆಟ್ ಆಟಗಾರ ಮೊಹಮ್ಮದ್ ಅಜರುದ್ದೀನ್ ಘಂಟೆ ಬಾರಿಸಿದ್ದಕ್ಕೆ ಕ್ರಿಕೆಟ್ ಆಟಗಾರ ಗೌತಮ್ ಗಂಭೀರ್  ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಂಗಾಳ ಕ್ರಿಕೆಟ್ ಅಸೋಸಿಷನ್ ವತಿಯಿಂದ ಮಾಜಿ ಟೀಂ ಇಂಡಿಯಾ ಕ್ಯಾಪ್ಟನ್ ಅಜರುದ್ದೀನ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಬಿಸಿಸಿಸಿಐ ಭ್ರಷ್ಟಾಚಾರ ವಿರುದ್ಧ ನೀತಿಗೆ ವಿರೋಧ ಎಂಬಂತೆ ಅಜರುದ್ದೀನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದನ್ನು ಸಹಿಸಲಾಗದು ಎಂದಿದ್ದಾರೆ.

ಹೈದ್ರಾಬಾದ್ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಅಜರುದ್ದೀನ್ ಸ್ಪರ್ಧಿಸುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದನ್ನು ಕೇಳಿದ   ನಂತರ ಶಾಕ್ ಆಗಿದ್ದೆ. ಘಂಟೆ ಬಾರಿಸಿದದ್ದು, ಅಧಿಕಾರ ಕೊಟ್ಟಂತೆ ಕೇಳಿಸುತಿತ್ತು ಎಂದು ಟ್ವೀಟರ್ ನಲ್ಲಿ ಅವರು ಬರೆದುಕೊಂಡಿದ್ದಾರೆ.


ಅಜರುದ್ದೀನ್ 99 ಟೆಸ್ಟ್ ಹಾಗೂ 334 ಏಕದಿನ ಪಂದ್ಯಗಳಲ್ಲಿ ಭಾರತದ ಪರ ಆಡಿದ್ದು, 2000ನೇ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ಪಂದ್ಯದಲ್ಲಿ ತೊಡಗಿಸಿಕೊಂಡ ಆರೋಪದ ಮೇರೆಗೆ ಬಿಸಿಸಿಐ ಅವರನ್ನು ನಿರ್ಬಂಧಿಸಿತ್ತು. ಆದಾಗ್ಯೂ, 2012ರಲ್ಲಿ ಆಂಧ್ರ ಪ್ರದೇಶ ಹೈಕೋರ್ಟ್ ನಿರ್ಬಂಧ ಆದೇಶವನ್ನು  ವಜಾಗೊಳಿಸಿತ್ತು .

 ಬಿಸಿಸಿಐ ನಿರ್ಬಂಧತೆ ವಿಚಾರದ  ಬಗ್ಗೆ ಸ್ಪಷ್ಟತೆ ಕಾರಣ   ಜನವರಿ 2017ರಲ್ಲಿ ಹೈದ್ರಾಬಾದ್  ಕ್ರಿಕೆಟ್ ಅಸೋಸಿಯೇಷನ್ ಚುನಾವಣೆಯಲೂ  ಅಜರುದ್ದೀನ್ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರಲಿಲ್ಲ.  ಬಿಸಿಸಿಐ, ಐಸಿಸಿ ಅಥವಾ ಇನ್ನಿತರ ಯಾವುದೇ ಸಂಸ್ಥೆಗಳಿಂದಲೂ ಧೀರ್ಘಾವಧಿ ಕಾಲ ಅಜರುದ್ದೀನ್ ಗೆ ನಿರ್ಬಂಧ ವಿಧಿಸದ ಹಿನ್ನೆಲೆಯಲ್ಲಿ ಕ್ರಿಕೆಟ್ ಮಂಡಳಿ ಚುನಾವಣೆಗೆ ಸ್ಪರ್ಧಿಸಲು ಈ ವರ್ಷದ ಆರಂಭದಲ್ಲಿ ಅವಕಾಶ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com