ವೃದ್ಧಿಮಾನ್ ಸಾಹ ವಿಕೆಟ್ ಕೀಪಿಂಗ್ ಬಗ್ಗೆ ದಾದಾ ಹೇಳಿದ್ದೇನು ಗೊತ್ತಾ?

2014 ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದಾಗಿನಿಂದಲೂ ವಿಕೆಟ್ ಕೀಪಿಂಗ್ ನಲ್ಲಿ ಆ ಸ್ಥಾನ ತುಂಬಿರುವುದು ವೃದ್ಧಿಮಾನ್ ಸಾಹ.
ವೃದ್ಧಿಮಾನ್ ಸಾಹ ವಿಕೆಟ್ ಕೀಪಿಂಗ್ ಬಗ್ಗೆ ದಾದಾ ಹೇಳಿದ್ದೇನು ಗೊತ್ತಾ?
ವೃದ್ಧಿಮಾನ್ ಸಾಹ ವಿಕೆಟ್ ಕೀಪಿಂಗ್ ಬಗ್ಗೆ ದಾದಾ ಹೇಳಿದ್ದೇನು ಗೊತ್ತಾ?
Updated on
ಕೋಲ್ಕತ್ತಾ: 2014 ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದಾಗಿನಿಂದಲೂ ವಿಕೆಟ್ ಕೀಪಿಂಗ್ ನಲ್ಲಿ ಆ ಸ್ಥಾನ ತುಂಬಿರುವುದು ವೃದ್ಧಿಮಾನ್ ಸಾಹ. ಆದರೆ ವೃದ್ಧಿಮಾನ್ ಸಾಹಗೆ ಭುಜದ ಶಸ್ತ್ರಚಿಕಿತ್ಸೆಯಾಗಬೇಕಾಗಿರುವುದರಿಂದ ಸಾಹಗೆ ಪರ್ಯಾಯವಾಗಿ ವಿಕೆಟ್ ಕೀಪರ್ ನ ಅಗತ್ಯವಿದೆ. 
ಶಸ್ತ್ರಚಿಕಿತ್ಸೆಯ ಬಳಿಕವೂ ದೀರ್ಘಾವಧಿವರೆಗೆ ಸಾಹ ತಂಡದಿಂದ ಹೊರಗುಳಿಯಲಿದ್ದಾರೆ. ಈ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದು, ಕಳೆದ 5-10 ವರ್ಷಗಳಲ್ಲಿ ವೃದ್ಧಿಮಾನ್ ಸಾಹ ಭಾರತದ ಅತ್ಯುತ್ತಮ ವಿಕೆಟ್ ಕೀಪರ್ ಆಗಿದ್ದಾರೆ ಎಂದು ಹೇಳಿದ್ದಾರೆ. 
ಸಾಹ ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ದೀರ್ಘಾವಧಿ ತಂಡದಿಂದ ಹೊರಗುಳಿಯಬಹುದು ಆದರೆ  ಕಳೆದ 5-10 ವರ್ಷಗಳಲ್ಲಿ ಭಾರತ ಕಂಡ ಅತ್ಯುತ್ತಮ ವಿಕೆಟ್ ಕೀಪರ್ ಆಗಿದ್ದಾರೆ, ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಗಂಗೂಲಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com