ಹೈದರಾಬಾದ್ ಟೆಸ್ಟ್ ಮೊದಲ ಇನ್ನಿಂಗ್ಸ್: 311ಕ್ಕೆ ವಿಂಡೀಸ್ ಆಲೌಟ್, ಉಮೇಶ್ ಯಾದವ್ ಗೆ 6 ವಿಕೆಟ್!

ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಎರಡನೇ ದಿನದಾಟ ಸಂದರ್ಭದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ 311ಕ್ಕೆ ಆಲೌಟ್ ಆಗಿದೆ.
ಆರು ವಿಕೆಟ್ ಪಡೆದ ಉಮೇಶ್ ಯಾದವ್
ಆರು ವಿಕೆಟ್ ಪಡೆದ ಉಮೇಶ್ ಯಾದವ್

ಹೈದರಾಬಾದ್ : ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್  ಎರಡನೇ ದಿನದಾಟ ಸಂದರ್ಭದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ 311ಕ್ಕೆ ಆಲೌಟ್ ಆಗಿದೆ.

ವೆಸ್ಟ್ ಇಂಡೀಸ್ ಪರ ರೋಸ್ಟನ್ ಚೆಸ್ ಆಕರ್ಷಕ 106, ಜಾಸನ್ ಹೊಲ್ಡರ್ 52, ಶಾನೆ ಡೌರಿಚ್ 30, ಶಾಯ್ ಹೊಪ್ 36 ರನ್ ಪಡೆದುಕೊಂಡರು.

ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ  7 ವಿಕೆಟ್ ನಷ್ಟಕ್ಕೆ  295 ರನ್ ಗಳಿಸಿದ ವೆಸ್ಟ್ ಇಂಡೀಸ್ ಇಂದು 311 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.

 ವೆಸ್ಟ್ ಇಂಡೀಸ್ ಪರ ಶತಕಗಳಿಸಿದ ರೊಸ್ಟನ್ ಚೆಸ್,  ಶಾಹಿ ಹೋಪ್  ವಿಕೆಟ್ ಗಳನ್ನು   ಉಮೇಶ್ ಯಾದವ್ ಪಡೆದರೆ,  ಅಶ್ವಿನ್ ಬೌಲಿಂಗ್ ನಲ್ಲಿ  ರವಿಂದ್ರ ಜಡೇಜಾಗೆ ಕಿರನ್ ಪೊವೆಲ್ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನೂ ಕುಲದೀಪ್ ಯಾದವ್  ಶಿಮ್ರಾನ್ ಹೆಟ್ ಮೈರ್,  ಕೆ.ಬ್ರಾಥ್ ವೈಟ್ ಅವರನ್ನು ಎಲ್ ಬಿ ಡಬ್ಲ್ಯೂ ಬಲೆಗೆ ಕೆಡವಿದರು.

ಭಾರತದ ಪರ ಉಮೇಶ್ ಯಾದವ್ 88 ರನ್ ಗಳನ್ನು ನೀಡಿ 6 ವಿಕೆಟ್ ಗಳನ್ನು ಕಬಳಿಸುವ ಮೂಲಕ  ವೆಸ್ಟ್ ಇಂಡೀಸ್ ತಂಡವನ್ನು ಕಡಿಮೆ ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com