ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ತಂಡ ಆಯ್ಕೆ: ಮೂರನೇ ಓಪನರ್, ಎರಡನೇ ವಿಕೆಟ್ ಕೀಪರ್‏ದೇ ಚಿಂತೆ!

ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ತಂಡ ಆಯ್ಕೆಯಲ್ಲಿ ಮೂರನೇ ಓಪನರ್ ಹಾಗೂ ಎರಡನೇ ವಿಕೆಟ್ ಕೀಪರ್ ದೇ ಟೀಂ ಇಂಡಿಯಾ ನಿರ್ವಹಣೆ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯ ಪ್ರಮುಖ ಚಿಂತೆಯಾಗಿದೆ.
ಪೃಥ್ವಿ ಶಾ
ಪೃಥ್ವಿ ಶಾ
Updated on

ಹೈದರಾಬಾದ್: ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ತಂಡ ಆಯ್ಕೆಯಲ್ಲಿ ಮೂರನೇ ಓಪನರ್ ಹಾಗೂ ಎರಡನೇ ವಿಕೆಟ್ ಕೀಪರ್ ನದ್ದೇ ಟೀಂ ಇಂಡಿಯಾ ನಿರ್ವಹಣೆ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯ ಪ್ರಮುಖ ಚಿಂತೆಯಾಗಿದೆ.

ಆಸ್ಟ್ರೇಲಿಯಾದ ಅಡಿಲೇಡ್ ನಲ್ಲಿ ಡಿಸೆಂಬರ್ 6 ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಹನ್ನೊಂದು ಮಂದಿ ಆಟಗಾರರ ಪೈಕಿ ಯುವ ಆಟಗಾರರಾದ ಪೃಥ್ವಿ ಶಾ ಹಾಗೂ ರಿಷಬ್ ಪಂತ್ ಸ್ಥಾನ ನೀಡಬೇಕಾಗಿದೆ.

ಆದರೆ, ಟೆಸ್ಟ್ ಸರಣಿಯಲ್ಲಿ ಓಪನರ್ ಪಾತ್ರ ಮಹತ್ವದಾಗಿದ್ದು, 17 ಇನ್ನಿಂಗ್ಸ್ ನಲ್ಲಿ 14 ಬಾರಿ ಕೆ. ಎಲ್. ರಾಹುಲ್ ವಿಫಲವಾಗಿದ್ದರೂ, ಅವರನ್ನು ತಂಡ ನಿರ್ವಹಣೆದಾರರು ಬೆಂಬಲಿಸುತ್ತಿದ್ದಾರೆ. ರಾಹುಲ್ ಅವರ ಲೋಪಗಳನ್ನು ಗಮನಿಸುತ್ತಿದ್ದು, ಸರಿಪಡಿಸಿಕೊಳ್ಳುವಂತೆ ಹೇಳುತ್ತಿದ್ದೇನೆ. ರಾಹುಲ್ ಗುಣಮಟ್ಟದ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದ ನಂತರ ಪ್ರತಿಕ್ರಿಯೆ ನೀಡಿದ್ದರು.

ಅಡಿಲೇಡ್ ಟೆಸ್ಟ್ ನಲ್ಲಿ ರಾಹುಲ್ ಗೆ ಮತ್ತೊಂದು ಅವಕಾಶ ನೀಡುವುದು ವಿರಾಟ್ ಕೊಹ್ಲಿ ಹೇಳಿಕೆಯಿಂದ ತಿಳಿದುಬಂದಿದೆ. ಆದರೆ, ರಾಹುಲ್ ಮತ್ತೆ ವಿಫಲರಾದ್ದರೆ ಏನು ಎಂಬುದು ಆಯ್ಕೆದಾರರನ್ನು ಚಿಂತೆಗೀಡು ಮಾಡಿದೆ.

ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಓಪನರ್ ಆಗಿರುವ ಮಾಯಾಂಕ್ ಆಗರ್ ವಾಲ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಪ್ರವಾಸಕ್ಕೆ ಇನ್ನೂ ನಿರ್ಧರಿಸಿಲ್ಲ

ಅಗರ್ ವಾಲ್, ಪೃಥ್ವಿ ಶಾ, ಹಾಗೂ ರಾಹುಲ್ ಈ  ಮೂವರು ವಿಶೇಷ ಓಪನರ್ ಆಗಿ ಕಣಕ್ಕೀಳಿಸುವ ಬಗ್ಗೆ ಆಯ್ಕೆದಾರರು ಇನ್ನೂ ಚಿಂತೆ ಮಾಡುತ್ತಲೇ ಇದ್ದಾರೆ. ರಾಹುಲ್ ಅವರ ಕೆಟ್ಟ ಪ್ರದರ್ಶನ ಯುವ ಬ್ಯಾಟ್ಸ್ ಮನ್ ಗಳಲ್ಲಿ ಒತ್ತಡಕ್ಕೂ ಕಾರಣವಾಗಿದೆ. ಒಂದು ವೇಳೆ ಅಗರ್ ವಾಲ್ ಅವರನ್ನು ಪರಿಗಣಿಸದೆ ಹೋದರೆ, ಕರುಣ್ ನಾಯ್ಯರ್ ಆಡುವ ಸಾಧ್ಯತೆ ಹೆಚ್ಚಾಗಿದೆ.

ನ್ಯೂ ಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಮಾಯಾಂಕ್ ಅಗರ್ ವಾಲ್ ಹಾಗೂ ವಿಜಯ್ ಓಪನರ್ ಆಗಿ ಉತ್ತಮ ಪ್ರದರ್ಶನ ತೋರಿದ್ದರು. ಇದನ್ನೆ ಹೆಚ್ಚಿನ ತಾಂತ್ರಿಕ ವಿಧಾನವಾಗಿ ಬಳಸಿಕೊಳ್ಳಬಹುದಾಗಿದೆ. ಆದರೆ. ಈ ಬಗ್ಗೆ ಆಯ್ಕೆದಾರ ಸಮಿತಿ ಮುಂದೆ ಮಾತನಾಡಿಲ್ಲ ಎಂದು ಮಾಜಿ ಓಪನರ್ ಹಾಗೂ ವಿಕೆಟ್ ಕೀಪರ್ ದೀಪ್ ದೇಸ್ ಗುಪ್ತಾ ತಿಳಿಸಿದ್ದಾರೆ.

ಪೃಥ್ವಿ ಶಾ ಉತ್ತಮ ಬ್ಯಾಟ್ಸ್ ಮನ್ ಆಗಿದ್ದು,  ದ್ವಿತೀಯ ಕೀಪರ್ ಆಗಬಹುದು ಅಂತೆಯೇ ಓಪನರ್ ಆಗಿಯೂ ಮೈದಾನಕ್ಕೀಳಿಸಬಹುದು ಎಂದು ದೇಸ್ ಗುಪ್ತಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com