ಐಸಿಸಿ ನೀತಿ ಸಂಹಿತೆ ಉಲ್ಲಂಘನೆ: ಎರಡು ಪಂದ್ಯಗಳಿಂದ ಕೋಚ್ ಸ್ಟುವರ್ಟ್ ಲಾ ಔಟ್ !

ಐಸಿಸಿ ನಿಂತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಭಾರತ ವಿರುದ್ಧ ಮುಂದಿನ ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ ವೆಸ್ಟ್ ಇಂಡೀಸ್ ತರಬೇತುದಾರ ಸ್ಟುವರ್ಟ್ ಲಾ ಅವರನ್ನು ಅಮಾನತುಗೊಳಿಸಲಾಗಿದೆ.
ಸ್ಟುವರ್ಟ್ ಲಾ
ಸ್ಟುವರ್ಟ್ ಲಾ

ದುಬೈ: ಇತ್ತೀಚಿಗೆ ಹೈದರಾಬಾದ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ  ಟೆಸ್ಟ್  ಪಂದ್ಯದ ವೇಳೆಯಲ್ಲಿ ಐಸಿಸಿ ನಿಂತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ  ಭಾರತ ವಿರುದ್ಧ ಮುಂದಿನ ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ ವೆಸ್ಟ್ ಇಂಡೀಸ್ ತರಬೇತುದಾರ ಸ್ಟುವರ್ಟ್ ಲಾ ಅವರನ್ನು ಅಮಾನತುಗೊಳಿಸಲಾಗಿದೆ.

ವೈಯಕ್ತಿಕವಾಗಿ ಆಟಗಾರರನ್ನು ಬೆಂಬಲಿಸುವ ಮೂಲಕ  ಐಸಿಸಿ ನೀತಿ ಸಂಹಿತೆ ಲೆವೆಲ್ -2ನ್ನು ಸ್ಟುವರ್ಟ್ ಲಾ ಉಲ್ಲಂಘಿಸಿದ್ದು, ತಪಿತಸ್ಥರೆಂದು ಕಂಡುಬಂದಿದ್ದಾರೆ.

ಎರಡನೇ ಇನ್ನಿಂಗ್ಸ್ ನ ಮೂರನೇ ದಿನದ ಪಂದ್ಯದಲ್ಲಿ  ವೆಸ್ಟ್ ಇಂಡೀಸ್  ಎಡಗೈ  ಬ್ಯಾಟ್ಸ್ ಮನ್ ಕೆ. ಪೊವೆಲ್  ಔಟಾದಾಗ ಸ್ಟುವರ್ಟ್ ಲಾ ಟಿವಿ ಅಂಪೈಯರ್ ಕೊಠಡಿಗೆ ತೆರಳಿ ಅಸಮರ್ಪಕವಾಗಿ ಟೀಕೆ ಮಾಡಿದ್ದರು. ನಂತರ ನಾಲ್ಕನೇ ಅಂಪೈರ್  ಬಳಿಗೂ ತೆರಳಿ ಆಟಗಾರರ ಸಮ್ಮುಖದಲ್ಲಿಯೇ  ಸೂಕ್ತವಲ್ಲದ ರೀತಿಯಲ್ಲಿ ಟೀಕೆ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಸ್ಟುವರ್ಟ್ ಲಾ ಅವರನ್ನು ಇದೇ  ತಿಂಗಳ 21 ಮತ್ತು 24 ರಂದು  ಕ್ರಮವಾಗಿ ಗುವಾಹಟಿ ಹಾಗೂ ವಿಶಾಖಪಟ್ಟಣಂನಲ್ಲಿ ನಡೆಯಲಿರುವ ಏಕದಿನ ಪಂದ್ಯಗಳಿಂದ ಅಮಾನತುಗೊಳಿಸಲಾಗಿದ್ದು,  ಪಂದ್ಯದ ಶೇ, 25 ರಷ್ಟು ದಂಡ ವಿಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com