ಅಂಬಾಟಿ ರಾಯುಡು ಸ್ಥಿರತೆಯಿಂದ ನಮ್ಮ ಮಧ್ಯಮ-ಕ್ರಮಾಂಕದ ಗೊಂದಲಕ್ಕೆ ಪರಿಹಾರ: ಕೊಹ್ಲಿ

ಆಂಬಟಿ ರಾಯುಡು ಸ್ಥಿರತೆಯ ಪ್ರದರ್ಶನ ನೀಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ, ರಾಯುಡು ಸ್ಥಿರತೆ ಕಾಯ್ದುಕೊಂಡಿರುವುದು ಮಧ್ಯಮ ಕ್ರಮಾಂಕದ ಬ್ಯಾಟ್ಮ್ಸ್ಮನ್ ಗೊಂದಲವನ್ನು ಪರಿಹರಿಸಲಿದೆ ಎಂದು ಹೇಳಿದ್ದಾರೆ.
ಗುವಾಹಟಿ: ಆಂಬಟಿ ರಾಯುಡು ಸ್ಥಿರತೆಯ ಪ್ರದರ್ಶನ ನೀಡುತ್ತಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿರಾಟ್ ಕೊಹ್ಲಿ,  ರಾಯುಡು ಸ್ಥಿರತೆ ಕಾಯ್ದುಕೊಂಡಿರುವುದು ಮಧ್ಯಮ ಕ್ರಮಾಂಕದ ಬ್ಯಾಟ್ಮ್ಸ್ಮನ್  ಗೊಂದಲವನ್ನು ಪರಿಹರಿಸಲಿದೆ ಎಂದು ಹೇಳಿದ್ದಾರೆ. 
ಮುಂದಿನ ವಿಶ್ವಕಪ್ ಗೂ ಮುನ್ನ ಅಂಬಟಿ ರಾಯುಡು 4 ನೇ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುವ ಸ್ಥಿರತೆಯನ್ನು ಕಾಯ್ದುಕೊಂಡಿದ್ದಾರೆ. ಈ ವರೆಗೂ ಮಧ್ಯಮ ಕ್ರಮಾಂಕದ ಬ್ಯಾಟ್ಮ್ಸ್ಮನ್ ಆಯ್ಕೆ ಮಾಡುವ ಗೊಂದಲ ಉಂಟಾಗಿತ್ತು. ಆದರೆ ಆಂಬಟಿ ರಾಯುಡು ಸ್ಥಿರತೆ ಕಾಯ್ದುಕೊಂಡಿರುವುದು ಗೊಂದಲಕ್ಕೆ ಪರಿಹಾರ ಸಿಕ್ಕಂತಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ. 
ನಾಲ್ಕನೇ ಕ್ರಮಾಂಕದಲ್ಲಿ ಆಡಲು ಹಲವು ಆಟಗಾರರಿಗೆ ಅವಕಾಶ ನೀಡಲಾಗಿತ್ತು. ಆದರೆ ಅವರ್ಯಾರೂ ಸೂಕ್ತವಾಗಿ ಹೊಂದಾಣಿಕೆ ಆಗಲಿಲ್ಲ. ಇತ್ತೀಚಿನ ದಿನಗಳಲ್ಲಿ ಆಂಬಟಿ ರಾಯುಡು ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 
ಏಷ್ಯಾಕಪ್ ನಲ್ಲಿಯೂ ಆಂಬಟಿ ರಾಯುಡು ಉತ್ತಮ ಪ್ರದರ್ಶನ ನೀಡಿದ್ದರು ಮುಂದಿನ ವರ್ಲ್ಡ್ ಕಪ್ ವರೆಗೂ ಆಂಬಟಿ ರಾಯುಡುಗೆ ಕಾಲಾವಕಾಶ ನೀಡಬೇಕಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com