ಪಾಕ್, ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟಿಗರ ವಿರುದ್ಧ ಸ್ಪಾಟ್-ಫಿಕ್ಸಿಂಗ್ ಆರೋಪ: ವಿಡಿಯೋ ಕೇಳಿದ ಐಸಿಸಿ
ನವದೆಹಲಿ: ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಕ್ರಿಕೆಟಿಗರ ವಿರುದ್ಧ ಸ್ಟಾಟ್ -ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ವಿಡಿಯೋ ತುಣುಕುಗಳನ್ನು ನೀಡುವಂತೆ ಅಲ್ ಜಜೀರಾ ಸುದ್ದಿ ವಾಹಿನಿಯನ್ನು ಐಸಿಸಿ ಕೇಳಿದೆ.
2011 ಮತ್ತು 2012ರ ಪುರಾವೆ ಪ್ರಕಾರ ಇಂಗ್ಲೆಂಡ್ ತಂಡದ ಚಿಕ್ಕ ಗುಂಪು ಏಳು ಪಂದ್ಯಗಳಲ್ಲಿ, ಆಸ್ಟ್ರೇಲಿಯಾ ಆಟಗಾರರು ಐದು ಪಂದ್ಯಗಳಲ್ಲಿ, ಪಾಕಿಸ್ತಾನ ಆಟಗಾರರು ಮೂರು ಪಂದ್ಯಗಳಲ್ಲಿ ಹಾಗೂ ಇತರ ತಂಡಗಳ ಆಟಗಾರರು ಒಂದು ಪಂದ್ಯದಲ್ಲಿ ಅಕ್ರಮ ಸ್ಟಾಟ್ -ಫಿಕ್ಸಿಂಗ್ ನಡೆಸಿದ್ದಾರೆ ಎಂದು ಅಲ್ ಜಜೀರಾ ವಾಹಿನಿಯ ವೆಬ್ ಸೈಟ್ ವರದಿಯಲ್ಲಿ ಹೇಳಿದೆ.
ಅಲ್ ಜಜೀರಾ ವಾಹಿನಿಯ ಮೊದಲ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು , ಇಂತಹ ನಿರ್ಣಾಯಕ ವಿಷಯದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ಸುದ್ದಿವಾಹಿನಿಯೂ ತೊಡಗಿಸಿಕೊಳ್ಳುವಂತೆ ಪದೇ ಪದೇ ಪ್ರಯತ್ನ ಮಾಡಲಾಗಿದೆ ಎಂದು ಐಸಿಸಿ ಭ್ರಷ್ಟಾಚಾರ ನಿಗ್ರಹ ವಿಭಾಗದ ಗ್ರಾಮ್ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.
ಈ ವರ್ಷದ ಆರಂಭದಿಂದಲೂ ಪ್ರಸಾರ ಆರಂಭಿಸಿರುವ ಚಾನೆಲ್ ನಿಂದ ಮಾಡಲಾಗಿರುವ ರಹಸ್ಯ ಕಾರ್ಯಾಚರಣೆಯ ತುಣುಕುಗಳನ್ನು ಐಸಿಸಿ ಕೇಳಿದೆ. ಆದಾಗ್ಯೂ, ಈ ಚಾನೆಲ್ ನಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎಂದು ತಿಳಿಸಿದೆ.
ಇಂಟರ್ ಪೋಲ್ ನೊಂದಿಗೆ ಸಂಬಂಧಿತ ಮಾಹಿತಿ ವಿನಿಮಯ ಮಾಡಿಕೊಳ್ಳುವ ಸುದ್ದಿವಾಹಿನಿಯ ಬದ್ಧತೆಯನ್ನು ತಾವೂ ಸ್ವಾಗತಿಸಲಿದ್ದು, ಕ್ರೀಡೆಯಲ್ಲಿ ಈ ರೀತಿಯ ಅಪರಾಧಗಳ ಇನ್ನಿತರ ಕಾನೂನಾತ್ಮಕ ಸಂಸ್ಥೆಗಳಿಂದ ತನಿಖೆ ನಡೆದರೆ ಬೆಂಬಲ ನೀಡುವುದಾಗಿ ಮಾರ್ಷಲ್ ತಿಳಿಸಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ನಡೆದಿದ್ದ ಇಂಗ್ಲೆಂಡ್- ಭಾರತ, ಕೇಪ್ ಟೌನ್ ನಲ್ಲಿ ದಕ್ಷಿಣ ಆಫ್ರಿಕಾ- ಆಸ್ಟ್ರೇಲಿಯಾ, ದುಬೈಯಲ್ಲಿ ಪಾಕಿಸ್ತಾನ ವಿರುದ್ಧದ ಇಂಗ್ಲೆಂಡ್ ಸರಣಿಯ ಅನೇಕ ಪಂದ್ಯಗಳಲ್ಲಿ ಸ್ಟಾಟ್ -ಫಿಕ್ಸಿಂಗ್ ನಡೆದಿದೆ ಎಂದು ಸುದ್ದಿ ವಾಹಿನಿ ವರದಿಯಲ್ಲಿ ತಿಳಿಸಿದೆ.
ಶ್ರೀಲಂಕಾದಲ್ಲಿ 2012ರಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ವೇಳೆಯಲ್ಲಿ ಮುಂಬೈ ಮೂಲದ ದುಬೈ ವಾಸಿ ಪೋಟೋಗ್ರಾಫರ್ ಮ್ಯಾಚ್ ಫಿಕ್ಸರ್ ಅನೀಲ್ ಮುನಾವಾರ್ ಹಾಗೂ ಆತನ ಆಪ್ತರು ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮತ್ತು ಉಮರ್ ಅಕ್ಮಲ್ ಬಳಿ ಆಗಾಗ್ಗೆ ಬಂದು ಮಾತನಾಡುತ್ತಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ.
ಆದರೆ, ಈ ಆಟಗಾರರು ಸ್ಟಾಟ್ -ಫಿಕ್ಸಿಂಗ್ ನಲ್ಲಿ ತೊಡಗಿದ್ದಾರೆ ಎಂಬ ಬಗ್ಗೆ ಯಾವುದೇ ಸಲಹೆ ನೀಡುತ್ತಿಲ್ಲ ಎಂದು ಚಾನೆಲ್ ಸ್ಪಷ್ಪಪಡಿಸಿದೆ. ಈ ಆರೋಪವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಗ್ರಾಮ್ ಅಲೆಕ್ಸ್ ಮಾರ್ಷಲ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ