2019 ವಿಶ್ವಕಪ್ : ಅಶ್ವಿನ್ , ರಹಾನೆ ಹಾಗೂ ಕಾರ್ತಿಕ್ ಗೆ ಕೊನೆಯ ಅವಕಾಶ ?

ಇಂದಿನಿಂದ ದೇವಧರ್ ಟ್ರೋಫಿ ಆರಂಭವಾಗಲಿದ್ದು, ಎಲ್ಲರ ಕಣ್ಣು ಪೃಥ್ವಿ ಶಾ ಅವರತ್ತ ನೆಟ್ಟಿದೆ. ಆದರೆ, ಅಜಿಂಕ್ಯಾ ರಹಾನೆ, ರವೀಂದ್ರ ಅಶ್ವಿನ್ ಅವರಂತಹ ಹಿರಿಯ ಆಟಗಾರರು 50 ಓವರ್ ಗಳ ಸೀಮಿತ ಪಂದ್ಯದಲ್ಲಿ ಉಳಿಯಲಿದ್ದಾರೆಯೇ ಎಂಬುದನ್ನು ನಿರ್ಧರಿಸಲಿದೆ.
ಅಜಿಂಕ್ಯಾ ರಹಾನೆ
ಅಜಿಂಕ್ಯಾ ರಹಾನೆ

ನವದೆಹಲಿ:  ಇಂದಿನಿಂದ ದೇವಧರ್ ಟ್ರೋಫಿ ಆರಂಭವಾಗಲಿದ್ದು, ಎಲ್ಲರ ಕಣ್ಣು ಪೃಥ್ವಿ ಶಾ ಅವರತ್ತ ನೆಟ್ಟಿದೆ. ಆದರೆ,  ಅಜಿಂಕ್ಯಾ ರಹಾನೆ,  ರವೀಂದ್ರ ಅಶ್ವಿನ್ ಅವರಂತಹ ಹಿರಿಯ ಆಟಗಾರರು  50 ಓವರ್ ಗಳ ಸೀಮಿತ ಪಂದ್ಯದಲ್ಲಿ ಉಳಿಯಲಿದ್ದಾರೆಯೇ ಎಂಬುದನ್ನು ನಿರ್ಧರಿಸಲಿದೆ.

ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್ ಪಂದ್ಯಾವಳಿಗೂ ಮುನ್ನ ಟೀಂ ಇಂಡಿಯಾಕ್ಕೆ 17 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಿದ್ದು, ಹೆಚ್ಟು ಕಡಿಮೆ ಆಟಗಾರರ ಸಮಸ್ಯೆ ನಿವಾರಿಸಲ್ಪಟ್ಟಿದೆ  ಆದರೆ, ಇದು ಟೆಸ್ಟ್  ಮಾದರಿಯ ಸ್ಟಾರ್ ಆಟಗಾರರಿಗೆ ಹಾನಿಕಾರವಾಗುವ ಸಾಧ್ಯತೆ ಇದೆ.

ದೇಶಿಯ ಕ್ರೀಡೆಯಲ್ಲಿನ ಯುವಕರು ಉತ್ತಮ ಪ್ರದರ್ಶನ ತೋರುತ್ತಿದ್ದು, ಮುಂದಿನ ತಿಂಗಳು ನ್ಯೂಜಿಲ್ಯಾಂಡ್ ಪ್ರವಾಸದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಈ ಮಧ್ಯೆ ಟೆಸ್ಟ್ ಮಾದರಿಯ ಬೌಲರ್  ರವೀಂದ್ರ ಜಡೇಜಾ ಏಕದಿನ ಮಾದರಿಯ ಪಂದ್ಯಗಳನ್ನು ನಿರ್ವಹಿಸಲಬಲ್ಲರು ಎಂಬುದು ಕೇಳಿಬರುತ್ತಿದೆ. ಆದರೆ. ಅಶ್ವಿನ್ ಕಳೆದ ವರ್ಷದ ಜುಲೈ ತಿಂಗಳಿಂದ ಸೀಮಿತ ಓವರ್ ಗಳ ಪಂದ್ಯಗಳಲ್ಲಿ ಆಡೇ ಇಲ್ಲ.ವಿಶ್ವಕಪ್ ಹಿನ್ನೆಲೆಯಲ್ಲಿ ಅವರನ್ನು ಟೆಸ್ಟ್ ಮಾದರಿಯಿಂದ ಹೊರತರಲು ವಿಶೇಷ ಪ್ರಯತ್ನ ಮಾಡಲಾಗುತ್ತಿದೆ.

ಭಾರತ  ಎ. ತಂಡದ ನಾಯಕ ಹಾಗೂ ತಮಿಳುನಾಡಿನ ದಿನೇಶ್ ಕಾರ್ತಿಕ್ ಕೂಡಾ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿಯೇ ಅವರನ್ನು  ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಕೈ ಬಿಡಲಾಗಿತ್ತು. ಇತ್ತೀಚಿಗೆ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ರಿಷಬ್ ಪಂತ್  ಅವರು ಕಾರ್ತಿಕ್ ಅವರ ಸ್ಥಾನವನ್ನು ಆಕ್ರಮಿಸಿದ್ದಾರೆ.

ದೇವಧರ್ ಟ್ರೋಫಿ ಕಾರ್ತಿಕ್ ಪಾಲಿಗೆ ಪ್ರಮುಖವಾಗಿದೆ. ಇಲ್ಲಿ ಉತ್ತಮ ಪ್ರದರ್ಶನ ತೋರಿದರೆ ಮಾತ್ರ ಮುಂದಿನ ತಿಂಗಳು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಲಿದ್ದಾರೆ. ಇಲ್ಲದಿದ್ದರೆ ಆಯ್ಕೆದಾರರು ಕೈ ಬಿಡುವ ಸಾಧ್ಯತೆ ಹೆಚ್ಚಾಗಿದೆ.

ಟೆಸ್ಟ್ ಮಾದರಿಯ ಉಪನಾಯಕ ರಹಾನೆ ಕಳೆದ ವರ್ಷ ಫೆಬ್ರವರಿ ತಿಂಗಳಿನಿಂದಲೂ ಏಕದಿನ ಮಾದರಿಯ ಪಂದ್ಯಗಳನ್ನು ಆಡಿಲ್ಲ. ಇದನ್ನು ಆಯ್ಕೆದಾರರು ಗಮನಿಸಿದ್ದಾರೆ. ನಂಬರ್ 4ರ ಕ್ರಮಾಂಕದಲ್ಲಿ ಆಡುತ್ತಿದ್ದ ರಹಾನೆ ಜಾಗಕ್ಕೆ ಈಗ ಅಂಬಟ್ಟಿ ರಾಯುಡು ಬಂದಿದ್ದಾರೆ.

ಇತ್ತೀಚಿಗೆ ಮುಕ್ತಾಯಗೊಂಡ ವಿಜಯ್ ಹರಾರೆ ಟ್ರೋಪಿಯಲ್ಲಿ ಪ್ರಶಸ್ತಿಗಾಗಿ ಹೋರಾಟ ನಡೆಸಿದ  ಭಾರತದ ಎ, ಬಿ. ಹಾಗೂ ಸಿ,  ತಂಡಗಳು ದೇವಧರ್ ಟ್ರೋಫಿಯಲ್ಲಿ ಸೆಣಸಾಟ ನಡೆಸಲಿದ್ದು, ಇದೇ 27 ರಂದು  ಅಂತಿಮ ಪಂದ್ಯ  ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com