ನವಿ ಮುಂಬೈ ಮೂಲದ ಫಿಟ್ನೆಸ್ ತರಬೇತುಗಾರ್ತಿ 29ರ ಹರೆಯದ ವೃಂದಾ ರತಿ 2010ರಿಂದ ಬಿಸಿಸಿಐ ಸ್ಕೋರರ್ ಆಗಿದ್ದಾರೆ. ಹಲವು ಸ್ಥಳೀಯ ಪಂದ್ಯಗಳನ್ನು ಅಂಪೈರಿಂಗ್ ಮಾಡಿರುವ ವೃಂದಾ ರತಿ ಅಂಪೈರಿಂಗ್ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. "ಆರಂಭದಲ್ಲಿ, ಮಹಿಳಾ ಅಂಪೈರ್ ಬಗ್ಗೆ ಸಾಕಷ್ಟು ಅಸಮಾಧಾನಗಳಿತ್ತು. ಆದರೆ ನಿಮ್ಮ ಸಾಮರ್ಥ್ಯದ ಅರಿವು ನಿಮಗಿದ್ದಾಗ ನಿಮ್ಮ ಲಿಂಗವೆನ್ನುವುದು ಅಪ್ರಸ್ತುತವಾಗುತ್ತದೆ" ಅವರು ಹೇಳಿದ್ದಾರೆ.