ಮಾತನಾಡುವ ಮುನ್ನ ಸತ್ಯಾಸತ್ಯತೆಗಳನ್ನು ತಿಳಿದುಕೊಳ್ಳಿ ಮಿ. ರವಿಶಾಸ್ತ್ರಿ!

ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಭಾರತ ಕ್ರಿಕೆಟ್ ತಂಡ ಈ ಹಿಂದಿನ 15-20 ವರ್ಷಗಳ ಭಾರತದ ಇತರೆ ತಂಡಗಳಿಗಿಂತ ಈ ತಂಡ ವಿದೇಶಗಳಲ್ಲಿ .../
ರವಿಶಾಸ್ತ್ರಿ
ರವಿಶಾಸ್ತ್ರಿ
ಚೆನ್ನೈ: ಇಂಗ್ಲೆಂಡ್ ವಿರುದ್ದದ  ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಭಾರತ ಕ್ರಿಕೆಟ್ ತಂಡ ಈ ಹಿಂದಿನ 15-20 ವರ್ಷಗಳ ಭಾರತದ ಇತರೆ ತಂಡಗಳಿಗಿಂತ ಈ ತಂಡ ವಿದೇಶಗಳಲ್ಲಿ ಉತ್ತಮ ಪ್ರದರ್ಶನ ನೀಡಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ನೀಡಿರುವ ಹೇಳಿಕೆ ತೀವ್ರ ಟೀಕೆಗೊಳಗಾಗಿದೆ.
ಕಳೆದ ಮೂರು ವರ್ಷಗಳನ್ನ ಗಮನಿಸಿದ್ದರೆ ವಿದೇಶದಲ್ಲಿ ನಾವು 9 ಪಂದ್ಯಗಳನ್ನು ಗೆದ್ದಿದ್ದೇವೆ. ವೆಸ್ಟ್ ಇಂಡೀಸ್, ಮತ್ತು ಶ್ರೀಲಂಕಾದ ವಿರುದ್ಧ ಮೂರು ಸರಣಿಗಳಲ್ಲಿ ಗೆಲುವು ಸಾಧಿಸಿದೆ.ಕಡಿಮೆ ಅವಧಿಯಲ್ಲಿ ಹೆಚ್ಚು ರನ್  ಕಲೆಹಾಕಿದ ತಂಡವನ್ನು ಕಳೆದ 15-20 ವರ್ಷಗಳ ಅವಧಿಯಲ್ಲಿ ನೋಡಿಯೇ ಇಲ್ಲ. ಈ ಸರಣಿಯಲ್ಲಿ ಉತ್ತಮ ಆಟಗಾರರು ಆಡಿದ್ದಾರೆ ಎಂದು ಹೇಳಿದ್ದರು.
ದಾಖಲೆಗಳ ಪ್ರಕಾರ 2007 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಗೆದ್ದಿತ್ತು. 2002 ರಲ್ಲಿ ಜಯ ಗಳಿಸಿತ್ತು. 2003-04 ರಲ್ಲಿ ಆಸ್ಟ್ರೇಲಿಯಾದಲ್ಲಿ ಮತ್ತು 2010-11 ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹಾಗೂ 2008-098 ರಲ್ಲಿ  ನ್ಯೂಜಿ ಲ್ಯಾಂಡ್ ಗಳಲ್ಲಿ ನಡೆದ ಸರಣಿ ಟೆಸ್ಟ್ ಗಳಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿ ಗೆದ್ದಿತ್ತು. 
ಶಾಸ್ತ್ರಿ ಭಾರತ ತಂಡದ ಕೋಚ್ ಆದ ನಂತರ ಈ ಎಲ್ಲಾ ದೇಶಗಳಲ್ಲಿ ನಡೆದ ಮೂರು ಟೆಸ್ಟ್ ಗಳಲ್ಲಿ ಸೋಲನುಭವಿಸಿತು. ರವಿಶಾಸ್ತ್ರಿ ಅವರ ಮಾಹಿತಿ ತಪ್ಪಾಗಿದೆ, ರವಿಶಾಸ್ತ್ರಿ ಅವರ  ಹೇಳಿಕೆಯನ್ನು ಒಫ್ಪಲು ಸಾಧ್ಯವಿಲ್ಲ, ಪ್ರಸಕ್ತ ಇರುವ ತಂಜ ವಿದೇಶದಲ್ಲಿ ಉತ್ತಮವಾಗಿ ಆಡಿಲ್ಲ ಎಂದು ಮಾಜಿ ವಿಕೆಟ್ ಕೀಪರ್ ಭರತ್ ರೆಡ್ಡಿ ಹೇಳಿದ್ದಾರೆ,
2007 ರಲ್ಲಿ ನಾವು ಇಂಗ್ಲೆಂಡ್ ನಲ್ಲಿ ಹಾಗೂ ಅದಕ್ಕೂ ಹಿಂದೆ 2 ಬಾರಿ ನಾವು ಗೆಲುವು ಸಾಧಿಸಿದ್ದೆವು. ಸದ್ಯ ಇರುವ ತಂಡದಲ್ಲಿ ವಿರಾಟ್ ಕೊಹ್ಲಿ ಹೊರತು ಪಡಿಸಿದರೇ ಬ್ಯಾಟಿಂಗ್ ನಲ್ಲಿ ಉತ್ತಮ ಆಟಗಾರರಿಲ್ಲ, ಹಾಗೇಯ ಬೌಲಿಂಗ್ ನಲ್ಲೂ ಕೂಡ ಇಲ್ಲ ಎಂದು  1979 ರಲ್ಲಿ ಇಂಗ್ಲೆಂಡ್ ಟೆಸ್ಟ್ ನಲ್ಲಿ ಭಾಗವಹಿಸಿದ್ದ ರೆಡ್ಡಿ ತಿಳಿಸಿದ್ದಾರೆ.
ಇನ್ನೂ ಶಾಸ್ತ್ರಿ ನೀಡಿರುವ ಸಾಂಖ್ಯಿಕ ದಾಖಲೆ ಸರಿಯಾಗಿಲ್ಲ ಎಂದು ಮಾಜಿ ಸ್ಪಿನ್ನರ್  ರಾಜು ಹೇಳಿದ್ದಾರೆ, 2003 ರಲ್ಲಿ ನಡೆದ ಪಾಕಿಸ್ತಾನ ಸರಣಿಯನ್ನು ನಾವು ಗೆದ್ದಿದ್ದವು ಆದರೇ. ಈಗಿರುವ ತಂಡಕ್ಕಿಂತ ನಾವು ಕೀಳಾಗಿರಲಿಲ್ಲ, 2007 ರಲ್ಲಿ ರಾಹುಲ್ ದ್ರಾವಿಡ್  ಇಂಗ್ಲೆಂಡ್ ನಲ್ಲಿ ನಡೆದ ಸರಣಿ ಟೆಸ್ಟ್ ಗೆದ್ದಿದ್ದರು. ಜೊತೆಗೆ 2003-04ರ ಆಸ್ಟ್ರೇಲಿಯಾದಲ್ಲೂ ಗೆಲುವು ಸಾಧಿಸಿತ್ತು, ಈ ಅಂಕಿ ಅಂಶಗಳೆಲ್ಲಾ  ಇವೆ ಎಂದು ಹೇಳಿದ್ದಾರೆ. ಹೋಲಿಕೆ ಮಾಡುವುದು ಕಷ್ಟ ನಮ್ಮ ತಂಡದಲ್ಲಿ ಉತ್ಸಾಹಿ ಆಟಗಾರರಿದ್ದರು, ಕೊನೆಯವರೆಗೂ ಹೋರಾಟ ನಡೆಸುತ್ತಲೇ ಇದ್ದರು.
 ಭಾರತ ಕ್ರಿಕೆಟ್ ತಂಡದಲ್ಲೇ ಇದು ಬೆಸ್ಟ್ ಅಲ್ಲವೇ ಅಲ್ಲ ಎಂದು ಸೌರವ್ ಗಂಗೂಲಿ ಕಾಲದ  ಆಟಗಾರ ಹೇಮಾಂಗ್ ಬದಾನಿ ಹೇಳಿದ್ದಾರೆ, ವಿದೇಶಗಳಲ್ಲಿ ಮನಾವು ಆಡುವಾಗ ಒಂದು ಸರಣಿಯಲ್ಲಿ 20 ವಿಕೆಟ್ ಗೆದ್ದಿದ್ದವು. ನಮ್ಮ ಬ್ಯಾಟಿಂಗ್ ನಲ್ಲಿ ವೈಫಲ್ಯವಿತ್ತು. ತಂಡವಾಗಿ ಇದು ಉತ್ತಮವಲ್ಲ ಎಂದು ಹೇಳಿದ್ದಾರೆ.,
ಈ ರೀತಿ ಮಾತನಾಡುವುದು ಸರಿಯಲ್ಲ, ಇಂತ ಮಾತುಗಳಿಂದ ಆಟಗಾರರ ಮನೋಧರ್ಮದ ಮೇಲೆ ಪರಿಣಾಮ ಬಿರುತ್ತದೆ. ಈ ಸರಣಿಯನ್ನು ಹಲವು ಸಮಸ್ಯೆ ಹಾಗೂ ಕಳಪೆ ತಂತ್ರಜ್ಞಾನವನ್ನು ನಾವು ಈ ಸರಣಿಯಲ್ಲಿ ಕಾಣಬಹುದು. ಟಿ-20 ಪಂದ್ಯ ಆಟಗಾರರ ಮನೋಭಾವವನ್ನು ಹಾಗೂ ತಾಳ್ಮೆ ಗೆಡಿಸುತ್ತದೆ, ಜೊತೆಗೆ ಪ್ರತಿ ಬಾಲ್ ನಲ್ಲೂ ಅವರು ರನ್ ಗಳಿಸುವ ಅಗತ್ಯವಿರುತ್ತದೆ ಎಂದು ರಾಷ್ಟ್ರ ಮಟ್ಟದ ಕ್ರಿಕೆಟ್ ಆಟಗಾರ ರಾಜು ಹೇಳಿದ್ದಾರೆ.
ರವಿಶಾಸ್ತ್ರಿ ಅವರಿಗೆ ಮತ್ತೊಂದು ವಿಷಯವನ್ನು ಸ್ಪಷ್ಟ ಪಡಿಸಬೇಕು, ವಿವಿಧ ಕಾಲಗಳಲ್ಲಿ ವಿವಿಧ ಜನರೇಷನ್ ಆಟಗಾರರು ಆಡಿರುತ್ತಾರೆ,. ಹೀಗಾಗಿ ಹೋಲಿಕೆ ಮಾಡಬಾರದು. ಹೇಳಿಕೆ ನೀಡುವುದು ಸುಲಂಭದ ಕೆಲಸ, ಹಾಗೆ ಸಾಕ್ಷಿ ಮೂಲಕ ತಕ್ಕುದಾದ ಅಂಕಿ ಅಂಶಗಳನೊಳಗೊಂಡ ಮಾಹಿತಿ ನೀಡಬೇಕು ಎಂದು ಗಮನಿಸಬೇಕು ಎಂದು ಸಲಹೆ ನೀಡಿಗ್ಗಾರೆ. ಒಂದು ವೇಳೆ ನಿಮ್ಮ ಬಳಿ ಉಚ್ಚಮ ಸಾಕ್ಷ್ಯ ಇರದಿದ್ದರೇ ದೂರ  ಉಳಿಯಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com