ತಮ್ಮ ದೇಶ ಪಂದ್ಯವನ್ನು ಗೆದ್ದರೆ ಅಭಿಮಾನದಿಂದ ಬಿಗುವುದು ಸಾಮಾನ್ಯ. ಆದರೆ ಪಾಕಿಸ್ತಾನ ಗೆಲುವನ್ನು ಪಾಕ್ ಆ್ಯಂಕರ್ ಕ್ಯಾಮೆರಾ ಮುಂದೆ ಮಧ್ಯದ ಬೆರಳನ್ನು ತೋರಿಸಿ ವಿಕೃತಿ ಮೆರೆದು ಸಂಭ್ರಮಿಸಿರುವ...
ಇಸ್ಲಾಮಾಬಾದ್: ತಮ್ಮ ದೇಶ ಪಂದ್ಯವನ್ನು ಗೆದ್ದರೆ ಅಭಿಮಾನದಿಂದ ಬಿಗುವುದು ಸಾಮಾನ್ಯ. ಆದರೆ ಪಾಕಿಸ್ತಾನ ಗೆಲುವನ್ನು ಪಾಕ್ ಆ್ಯಂಕರ್ ಕ್ಯಾಮೆರಾ ಮುಂದೆ ಮಧ್ಯದ ಬೆರಳನ್ನು ತೋರಿಸಿ ವಿಕೃತಿ ಮೆರೆದು ಸಂಭ್ರಮಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಏಷ್ಯಾಕಪ್ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ತಂಡವು ಬಾಂಗ್ಲಾ ದೇಶ ವಿರುದ್ಧ 3 ವಿಕೆಟ್ ಗಳಿಂದ ಜಯ ಗಳಿಸಿತ್ತು. ಈ ವೇಳೆ ತಮ್ಮ ದೇಶದ ಆಟಗಾರರ ಗೆಲುವನ್ನು ನ್ಯೂಸ್ ಬುಲೆಟಿನ್ ನಲ್ಲಿ ಹೇಳುತ್ತಿದ್ದಾಗ ಆ್ಯಂಕರ್ ಅಸಭ್ಯವಾಗಿ ಸನ್ನೆ ಮಾಡಿದ್ದಾರೆ.
ಪಾಕ್ ಟಿವಿ ಚಾನೆಲ್ ವೊಂದು ಸುದ್ದಿ ಪ್ರಸಾರ ಮಾಡುತ್ತಿತ್ತು. ಈ ವೇಳೆ ಮಹಿಳಾ ಆ್ಯಂಕರ್ ಜೊತೆಗೆ ಕುಳಿತಿದ್ದ ಆ್ಯಂಕರ್, ತಮ್ಮ ಎರಡೂ ಕೈಗಳ ಮಧ್ಯದ ಬೆರಳು ತೋರಿಸಿ, ಡ್ಯಾನ್ಸ್ ಮಾಡಿದ್ದಾರೆ. ಈ ಮೂಲಕ ಪಾಕ್ ತಂಡದ ಸಾಧನೆಯ ಸುದ್ದಿಯನ್ನು ನಗುತ್ತಲೆ ಹೇಳಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿಡಿಯೋ ಕಂಡ ನೆಟಿದರು ಆ್ಯಂಕರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
When panel producer is in so much hurry to switch!!! RIP Journalism