ರವಿಶಾಸ್ತ್ರೀ
ರವಿಶಾಸ್ತ್ರೀ

ರೋಹಿತ್ ಶರ್ಮಾ ಶಾಂತ ಗುಣದ ಪ್ರಭಾವ ಹೊಂದಿದ್ದಾರೆ : ರವಿ ಶಾಸ್ತ್ರಿ

ಶುಕ್ರವಾರ ಏಷ್ಯಾ ಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ತನ್ನ ಸಹ ಆಟಗಾರರೊಂದಿಗೆ ಶಾಂತ ಗುಣದಿಂದ ವರ್ತಿಸಿದ್ದರು . ಇದು ಪಂದ್ಯ ಗೆಲ್ಲಲು ಮತ್ತೊಂದು ಕಾರಣವಾಯಿತು ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರೀ ಹೇಳಿದ್ದಾರೆ.

ದುಬೈ: ಶುಕ್ರವಾರ  ಏಷ್ಯಾ ಕಪ್ ಪ್ರಶಸ್ತಿ  ಮುಡಿಗೇರಿಸಿಕೊಂಡ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ತನ್ನ ಸಹ ಆಟಗಾರರೊಂದಿಗೆ ಶಾಂತ ಗುಣದಿಂದ ವರ್ತಿಸಿದ್ದರು . ಇದು  ಪಂದ್ಯ ಗೆಲ್ಲಲು ಮತ್ತೊಂದು ಕಾರಣವಾಯಿತು ಎಂದು ಟೀಂ ಇಂಡಿಯಾ ಕೋಚ್  ರವಿಶಾಸ್ತ್ರೀ ಹೇಳಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ದಾಖಲೆಯ ಏಳನೇ ಬಾರಿಗೆ ಏಷ್ಯಾ ಕಪ್ ಗೆದ್ದ ಬಳಿಕ  ಅವರ ನಾಯಕತ್ವ ಕೌಶಲ್ಯದ ಬಗ್ಗೆ ಹೊಗಳಿದ ರವಿಶಾಸ್ತ್ರೀ, ಪೈನಲ್ ಪಂದ್ಯದಲ್ಲಿ ಬೌಲಿಂಗ್ ಬದಲಾವಣೆ ಮಾಡಿದದ್ದು, ಉತ್ತಮ ರೀತಿಯದಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್ ಶರ್ಮಾ ಶಾಂತ ಸ್ವಭಾವದವರಾಗಿದ್ದು, ಇದು ಅವರ ನಾಯಕತ್ವವನ್ನು ತೋರಿಸುತ್ತದೆ. ನಾಯಕತ್ವದ ಅಂಶಗಳಲ್ಲಿ  ರೋಹಿತ್ ಶರ್ಮಾ ನಿಜಕ್ಕೂ ಶಾಂತತೆಯಿಂದ ಆಟವಾಡಿದ್ದರು ಎಂದು ಐಸಿಸಿ ವೆಬ್ ಸೈಟ್ ನಲ್ಲಿ ಶಾಸ್ತ್ರೀ ಹೇಳಿದ್ದಾರೆ.

ಕೊನೆಯ 30 ಒವರ್ ಗಳಲ್ಲಿ ಕೇವಲ 100 ರನ್ ಅತ್ಯವಶ್ಯಕವಿದ್ದ ಸಂದರ್ಭದಲ್ಲಿ ಬೌಲಿಂಗ್ ಬದಲಾವಣೆ ಮಾಡಿದದ್ದು ಉತ್ತಮ ಚಿಂತನೆಯಾಗಿದೆ.ಆಕ್ರಮಣಕಾರಿ ವಾತಾವರಣದಲ್ಲಿಯೂ ಫೀಲ್ಡಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ತೋರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಠಿಣ  ಪರಿಸ್ಥಿತಿಯಲ್ಲೂ ಹೊಸ ಬಾಲ್ ನಲ್ಲಿ ಉತ್ತಮ ರೀತಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಮಧ್ಯ ಒವರ್ ಗಳಲ್ಲಿ ಬೌಲರ್ ಗಳು ಅತ್ಯತ್ತುವಾಗಿ ಆಟವಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ 30- ರಿಂದ 35 ರನ್ ಉಳಿಸಿದ್ದೇವೆ. ಪಂದ್ಯ ಗೆಲ್ಲಲು ಫೀಲ್ಡಿಂಗ್ ಕೂಡಾ ಬಹುಮುಖ್ಯ ಕಾರಣವಾಗಿದೆ ಎಂದು ರವಿಶಾಸ್ತ್ರೀ ತಿಳಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com