ವಿದೇಶಿ ಟಿ- 20 ಲೀಗ್: ಟೀ ಇಂಡಿಯಾ ಆಟಗಾರರಿಗೆ ಎನ್ ಓಸಿ ಇಲ್ಲ, ಯುವಿಗೆ ವಿನಾಯ್ತಿ

ಟೀಮ್ ಇಂಡಿಯಾ ಆಟಗಾರರು ವಿದೇಶಗಳಲ್ಲಿ ನಡೆಯುವ ಟಿ - 20 ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಇನ್ನು ಮುಂದೆ ನಿರಾಕ್ಷೇಪ ಪ್ರಮಾಣ ಪತ್ರ(ಎನ್‌ಒಸಿ) ನೀಡುವುದಿಲ್ಲ ಎಂದು ಬಿಸಿಸಿಐ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಯುವರಾಜ್ ಸಿಂಗ್
ಯುವರಾಜ್ ಸಿಂಗ್

ಮುಂಬೈ: ಟೀಮ್ ಇಂಡಿಯಾ ಆಟಗಾರರು ವಿದೇಶಗಳಲ್ಲಿ ನಡೆಯುವ ಟಿ - 20 ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಇನ್ನು ಮುಂದೆ ನಿರಾಕ್ಷೇಪ ಪ್ರಮಾಣ ಪತ್ರ(ಎನ್‌ಒಸಿ) ನೀಡುವುದಿಲ್ಲ ಎಂದು ಬಿಸಿಸಿಐ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಈ ವಿಷಯ ಕುರಿತು ಆಡಳಿತ ಮಂಡಳಿಯಲ್ಲಿ ಚರ್ಚೆ ನಡೆಸಲಾಗಿದೆ. ಆದರೆ ಯುವರಾಜ್ ಸಿಂಗ್ ಅವರಿಗೆ ಕೆನಡಾ ಗ್ಲೋಬಲ್ ಟಿ -20 ಲೀಗ್‌ನಲ್ಲಿ ಭಾಗವಹಿಸಲು ಮಾತ್ರ ವಿನಾಯಿತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಆದರೆ ಇನ್ನುಮುಂದೆ ಯಾವುದೇ ಆಟಗಾರನಿಗೆ ಎನ್‌ಒಸಿ ನೀಡುವುದಿಲ್ಲ ಎಂದು ಆಂಗ್ಲ ಪತ್ರಿಕೆಯೊಂದಕ್ಕೆ ಅಧಿಕಾರಿ ತಿಳಿಸಿದ್ದಾರೆ.

ಈ ವಿಷಯದಲ್ಲಿ ಸ್ಥಿರತೆ ಇರಬೇಕು, ಆದರೆ ಪ್ರಸ್ತುತ ಆಡಳಿತ ಮಂಡಳಿ ಆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆಟಗಾರರ ವೃತ್ತಿ ಜೀವನದ ಬಗ್ಗೆ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಮತ್ತೊಂದೆಡೆ, ಟೀಮ್ ಇಂಡಿಯಾದಲ್ಲಿ ನಿವೃತ್ತಿಯ ಬಗ್ಗೆ ಯೋಚಿಸುತ್ತಿರುವ ಕೆಲವರು, ಟಿ-20 ಲೀಗ್‌ಗಳಲ್ಲಿ ಆಡಲು ಬಯಸಿದ್ದಾರೆ. ಕೆಲವು  ಮಾಜಿ ಆಟಗಾರರು ಸನ್ನದ್ಧರಾಗಿದ್ದಾರೆ. ಆಡಳಿತಗಾರರ ಸಮಿತಿ ಕೈಗೊಂಡಿರುವ ನಿರ್ಧಾರ ಈ ಆಟಗಾರರ ಆಸೆಗೆ ತಣ್ಣೀರು ಎರಚಿದಂತಾಗಿದೆ.

"ನಿವೃತ್ತಿ ಸಾರ್ವತ್ರಿಕವಲ್ಲ. ಯಾವುದೇ ದೇಶ ತನ್ನ ಮಾಜಿ ಆಟಗಾರರಿಗೆ ಟಿ 20 ಲೀಗ್‌ಗಳಲ್ಲಿ ಆಡಲು ಅವಕಾಶ ನೀಡಿದರೆ, ಅದು ಐಸಿಸಿ ಸಮಸ್ಯೆಯಾಗುತ್ತದೆ" ಎಂದು ಅಧಿಕಾರಿ ಹೇಳಿದ್ದಾರೆ. ಆದರೆ, ಐಸಿಸಿ ಇದರ ಬಗ್ಗೆ ತಲೆಕಡಿಸಿಕೊಳ್ಳುವುದಿಲ್ಲ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com