
ವಿಜಯವಾಡ: ಆಂಧ್ರ ಹಾಗೂ ವಿದರ್ಭ ತಂಡಗಳ ನಡುವೆ 2019/20ನೇ ಆವೃತ್ತಿಯ ರಣಜಿ ಟ್ರೋಫಿ ಎ ಗುಂಪಿನ ಪಂದ್ಯದ ವೇಳೆ ಆಕಸ್ಮಿಕವಾಗಿ ಹಾವು ಅಂಗಳಕ್ಕೆ ಪ್ರವೇಶ ಮಾಡಿತು. ಹಾಗಾಗಿ, ಪಂದ್ಯವನ್ನು ಕೆಲಕಾಲ ನಿಲ್ಲಿಸಲಾಗಿತ್ತು. ಹಾವಿನ ವೀಡಿಯೋವನ್ನು ಬಿಸಿಸಿಐ ಡೊಮೆಸ್ಟಿಕ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಉಭಯ ತಂಡಗಳ ನಡುವಿನ ಪ್ರಸಕ್ತ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಟಾಸ್ ಗೆದ್ದು ವಿದರ್ಭ ತಂಡದ ನಾಯಕ ಫೈಜ್ ಫಜಲ್ ಫೀಲ್ಡಿಂಗ್ ಆಯ್ದುಕೊಂಡರು.
ಈ ವೇಳೆ ಹಾವು ಅಂಗಳ ಪ್ರವೇಶ ಮಾಡಿದ್ದರಿಂದ ತೀರ್ಪುಗಾರರು ಪಂದ್ಯವನ್ನು ನಿಲ್ಲಿಸಿದರು. ನಂತರ, ಅಂಗಳದ ಸಿಬ್ಬಂದಿ ಹಾವನ್ನು ಮೈದಾನದಿಂದ ಹೊರ ಅಟ್ಟುವಲ್ಲಿ ಯಸ್ವಿಯಾದರು.
Advertisement