ಮೂರನೇ ಅವಧಿಗೆ ಐಸಿಸಿ ಅಧ್ಯಕ್ಷನಾಗಿ ಮುಂದುವರೆಯುವುದಿಲ್ಲ: ಶಶಾಂಕ್ ಮನೋಹರ್

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ  ಶಶಾಂಕ್ ಮನೋಹರ್ ಅವರ ಅವಧಿ ಮುಂದಿನ ವರ್ಷ ಮೇ ತಿಂಗಳಲ್ಲಿ ಕೊನೆಗೊಳ್ಳಲಿದ್ದು, ಮೂರನೇ ಅವಧಿಗೆ ಸ್ಪರ್ಧಿಸುವುದಿಲ್ಲ.
ಶಶಾಂಕ್ ಮನೋಹರ್
ಶಶಾಂಕ್ ಮನೋಹರ್

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧ್ಯಕ್ಷ  ಶಶಾಂಕ್ ಮನೋಹರ್ ಅವರ ಅವಧಿ ಮುಂದಿನ ವರ್ಷ ಮೇ ತಿಂಗಳಲ್ಲಿ ಕೊನೆಗೊಳ್ಳಲಿದ್ದು, ಮೂರನೇ ಅವಧಿಗೆ ಸ್ಪರ್ಧಿಸುವುದಿಲ್ಲ.
  
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಮಾಜಿ ಅಧ್ಯಕ್ಷ ಮನೋಹರ್ ಪ್ರಸ್ತುತ ಐಸಿಸಿ ಮುಖ್ಯಸ್ಥರಾಗಿದ್ದಾರೆ. ಇದು ಅವರ ಎರಡನೇ ಅವಧಿಯೂ ಆಗಿದೆ. ಇಂಗ್ಲಿಷ್ ದಿನಪತ್ರಿಕೆ ದಿ ಹಿಂದೂ ವರದಿಯ ಪ್ರಕಾರ, ಮನೋಹರ್ ಐಸಿಸಿಯ ಅಧ್ಯಕ್ಷರಾಗಿ ಮೂರನೇ ಅವಧಿಗೆ ಮುಂದುವರೆಯಲು ಒಪ್ಪಿಲ್ಲ.
  
ಮನೋಹರ್ ಅವರು ಐಸಿಸಿಯ ಮುಖ್ಯಸ್ಥರಾಗಿ 2016 ರ ಮೇನಲ್ಲಿ ಎರಡು ವರ್ಷದ ಅವಧಿಗೆ ಮೊದಲ ಬಾರಿಗೆ ಸರ್ವಾನುಮತದಿಂದ ಆಯ್ಕೆಯಾದರು. ಇದರ ನಂತರ, ಮಾರ್ಚ್ ನಲ್ಲಿ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಕಳೆದ ವರ್ಷ ಎರಡನೇ ಬಾರಿಗೆ ಅವರು ಮತ್ತೆ ಐಸಿಸಿ ಮುಖ್ಯಸ್ಥರಾಗಿ ಆಯ್ಕೆಯಾದರು. ಮನೋಹರ್ ಅವರ ಎರಡನೇ ಅವಧಿಯ ಎರಡು ವರ್ಷ ಮುಂದಿನ ವರ್ಷ ಮೇ ತಿಂಗಳಲ್ಲಿ ಕೊನೆಗೊಳ್ಳಲಿದೆ.
  
“ಮುಂದಿನ ಎರಡು ವರ್ಷಗಳಿಗೆ ಐಸಿಸಿ ಮುಖ್ಯಸ್ಥ ಹುದ್ದೆಯನ್ನು ವಹಿಸಿಕೊಳ್ಳಲು ನನಗೆ ಆಸಕ್ತಿ ಇಲ್ಲ. ಹೆಚ್ಚಿನ ನಿರ್ದೇಶಕರು ನನ್ನ ಅಧಿಕಾರಾವಧಿಯನ್ನು ಮುಂದುವರೆಸಬೇಕೆಂದು ಮನವಿ ಮಾಡಿದ್ದರು. ಆದರೆ ಮುಂದಿನ ಅವಧಿಗೆ ಅಧ್ಯಕ್ಷನಾಗಿ ಮುಂದುವರೆಯಲಾರೆ, ನನ್ನ ಸ್ಥಾನದಲ್ಲಿ ಬೇರೊಬ್ಬರನ್ನು ನೇಮಿಸಲಾಗುವುದು” ಎಂದು ಶಂಶಾಂಕ್ ಮನಹೋರ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com