ಕುಡಿದ ಮತ್ತಿನಲ್ಲಿ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಮಗುವನ್ನು ತಳ್ಳಿದ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್

ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ತನ್ನ ಏಳು ವರ್ಷದ ಮಗನನ್ನು ಹೊಡೆದು ತಳ್ಳುವುದಲ್ಲದೆ ತನ್ನ ಮೇಲೆ ಹಲ್ಲೆ ನಡೆದ್ದಾಗಿ ಉತ್ತರ ಪ್ರದೇಶದ ಮೀರತ್ ನ ನಿವಾಸಿಯೊಬ್ಬ ದೂರಿದ್ದಾರೆ. 
ಪ್ರವೀಣ್ ಕುಮಾರ್
ಪ್ರವೀಣ್ ಕುಮಾರ್
Updated on

ಮೀರತ್: ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ತನ್ನ ಏಳು ವರ್ಷದ ಮಗನನ್ನು ಹೊಡೆದು ತಳ್ಳುವುದಲ್ಲದೆ ತನ್ನ ಮೇಲೆ ಹಲ್ಲೆ ನಡೆದ್ದಾಗಿ ಉತ್ತರ ಪ್ರದೇಶದ ಮೀರತ್ ನ ನಿವಾಸಿಯೊಬ್ಬ ದೂರಿದ್ದಾರೆ. 

"ಇಬ್ಬರೂ ನೆರೆಹೊರೆಯವರು ಮತ್ತು ಅವರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರ ಹೇಳಿಕೆಗಳ ಆಧಾರದ ಮೇಲೆ ನಾವು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ವೈದ್ಯಕೀಯ ದಾಖಲೆಗಳನ್ನು ಸಹ ಪರಿಗಣಿಸಲಾಗುತ್ತದೆ" ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಖಿಲೇಶ್ ನಾರಾಯಣ್ ಹೇಳಿದ್ದಾರೆ.

ಆದರೆ ಇನ್ನೊಂದೆಡೆ ಈ ದೂರು ಅಂತರಾಷ್ಟ್ರೀಯ ಕ್ರಿಕೆಟಿಗನೊಬ್ಬನ ಸಂಬಂಧಿಸಿರುವ ಕಾರಣ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪೊಲೀಸರು ತಮ್ಮ ದೂರನ್ನು ದಾಖಲಿಸಲು ನಿರಾಕರಿಸಿದ್ದಾರೆ ಎಂದು ಸಂತ್ರಸ್ಥ ಬಾಲಕನ ತಂದೆ ಹೇಳಿಕೊಂಡಿದ್ದಾರೆ.

"ನಾನು ಮಧ್ಯಾಹ್ನ 3: 00 ಕ್ಕೆ ಬಸ್ ನಿಲ್ದಾಣದಲ್ಲಿ ನನ್ನ ಮಗನಿಗಾಗಿ ಕಾಯುತ್ತಿದ್ದೆ. ಕುಮಾರ್ ಸ್ಥಳಕ್ಕೆ ಬಂದು, ತನ್ನ ಕಾರಿನಿಂದ ಹೊರಬಂದು ಮೊದಲು ಬಸ್ ಚಾಲಕನನ್ನು ನಿಂದಿಸಿದನು ಮತ್ತು ನಂತರ ನನ್ನನ್ನು ನಿಂದಿಸಿದನು. ಅವನು ಮದ್ಯಪಾನ ಮಾಡಿದ್ದವರಂತೆ ಕಾಣುತ್ತಿದ್ದರು. ನನ್ನ ಮೇಲೆ ಅವರು ಹಲ್ಲೆ ನಡೆಸಿದ್ದಾರೆ ಹಾಗೆಯೇ ಕೈ ಮುರಿದಿದ್ದಾರೆ.

"ನನ್ನ ಮಗನನ್ನೂ ಸಹ ಪ್ರವೀಣ್ ತಳ್ಳಿದ್ದಾರೆ. ಆದರೆ ಪೋಲೀಸರಿಗೆ ಈ ಬಗ್ಗೆ ದೂರು ಕೊಡಲು ಹೋದಾಗ ರಾಜಿ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಇನ್ನು ಈ ಸಂಬಂಧ ನನಗೆ ಜೀವ ಬೆದರಿಕೆಗಳು ಬರಲಾರಂಭಿಸಿದೆ"ಅವರು ಹೇಳಿದರು

ಆದರೆ ಘಟನೆ ಸಂಬಂಧ ಮಾಜಿ ಕ್ರಿಕೆಟಿಗ ಪ್ರವೀಣ್ ಕುಮಾರ್ ಇನ್ನೂ ಯಾವ ಹೇಳಿಕೆಯನ್ನೂ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com