ಬೆಂಗಳೂರು: ಭಾರತದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಅವರು ವಯೋಮಿತಿ ಪಂದ್ಯವೊಂದರಲ್ಲಿ ದ್ವಿಶತಕ ಸಿಡಿಸಿದ್ದಾರೆ. ಆ ಮೂಲಕ ತಂದೆ ನಡೆದು ಬಂದ ಹಾದಿಯಲ್ಲಿ ತಮ್ಮ ಪುತ್ರ ದಿಟ್ಟ ಹೆಜ್ಜೆಇಟ್ಟಿದ್ದಾರೆ ಎನ್ನಲಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ 14 ರ ವಯೋಮಿತಿ ವಲಯ ಮಟ್ಟದ ಉಪಾಧ್ಯಕ್ಷರ ಇಲೆವೆನ್ ತಂಡದ ಪರ 14ರ ಪ್ರಾಯದ ಸಮಿತ್ ದ್ರಾವಿಡ್ 201 ರನ್ ಬಾರಿಸಿದರು. ನಂತರ ಎರಡನೇ ಇನಿಂಗ್ಸ್ ನಲ್ಲೂ ಇದೇ ಲಯ ಮುಂದುವರಿಸಿದ ಅವರು 94 ರನ್ ಗಳಿಸಿದರು.
ಬಲಗೈ ಬ್ಯಾಟ್ಸ್ ಮನ್ 14 ವರ್ಷದ ಸಮಿತ್ಮೊದಲ ಇನ್ನಿಂಗ್ಸ್ನಲ್ಲಿ 250 ಎಸೆತಗಳಲ್ಲಿ 22 ಬೌಂಡರಿಗಳನ್ನು ಚಚ್ಚಿದ್ದಾರೆ. ಅಲ್ಲದೆ ಬೌಲಿಂಗ್ ನಲ್ಲಿ ಸಹ ಉತ್ತಮ ಒರದರ್ಶ್ನ ತೋರಿದ್ದ ದ್ರಾವಿಡ್ ಪುತ್ರ 26 ರನ್ ಗಳಿಗೆ ಮೂರು ವಿಕೆಟ್ ಪಡೆದರು,
ಧಾರವಾಡ ವಲಯದ ವಿರುದ್ಧ ದ್ವಿತೀಯ ಇನಿಂಗ್ಸ್ ನಲ್ಲಿ 26 ರನ್ ನೀಡಿ ಮೂರು ವಿಕೆಟ್ ಕಬಳಿಸಿದ್ದರು. ಪಂದ್ಯ ಅಂತಿಮವಾಗಿ ಡ್ರಾ ಆಗಿತ್ತು.
ಭಾರತದ ಮಾಜಿ ನಾಯಕ ದ್ರಾವಿಡ್ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿದ್ದಾರೆ.
Advertisement